ಕನ್ನಡವನ್ನು ಭುವನೇಶ್ವರಿ ಮಾಡಿ ದೌರ್ಜನ್ಯ ಮಾಡಿದ್ರಿ ಎಂದಿದ್ದ ಬಾನು ಮುಷ್ತಾಕ್

Krishnaveni K

ಸೋಮವಾರ, 25 ಆಗಸ್ಟ್ 2025 (13:28 IST)
Photo Credit: X
ಬೆಂಗಳೂರು: ಕನ್ನಡವನ್ನು ಭುವನೇಶ್ವರಿ ಮಾಡಿ ದೌರ್ಜನ್ಯ ಮಾಡಿದ್ರಿ ಎಂದಿದ್ದ ಸಾಹಿತಿ ಬಾನು ಮುಷ್ತಾಕ್ ಹಳೇ ಹೇಳಿಕೆ ಈಗ ವೈರಲ್ ಆಗಿದೆ. ಕನ್ನಡ ತಾಯಿಗೆ ಅವಮಾನ ಮಾಡಿದ್ದ ಬಾನು ಮುಷ್ತಾಕ್ ರಿಂದ ಮೈಸೂರು ದಸರಾ ಉದ್ಘಾಟನೆ ಮಾಡಿಸುತ್ತಿರುವುದು ಸರಿಯಲ್ಲ ಎಂದು ಮಾಜಿ ಸಂಸದ ಪ್ರತಾಪ್ ಸಿಂಹ ಕಿಡಿ ಕಾರಿದ್ದಾರೆ.

ಈ ಬಾರಿ ನಾಡಹಬ್ಬ ದಸರಾ ಮಹೋತ್ಸವವನ್ನು ಬೂಕರ್ ಪ್ರಶಸ್ತಿ ಪುರಸ್ಕೃತೆ ಬಾನು ಮುಷ್ತಾಕ್ ನೆರವೇರಿಸಲಿದ್ದಾರೆ ಎಂದು ಈಗಾಗಲೇ ಸಿಎಂ ಸಿದ್ದರಾಮಯ್ಯ ಘೋಷಣೆ ಮಾಡಿದ್ದಾರೆ. ಇದರ ನಡುವೆ ಅವರು ಕನ್ನಡ ತಾಯಿ ಭುವನೇಶ್ವರಿ ಬಗ್ಗೆ ಹೇಳಿರುವ ಹಳೇ ಹೇಳಿಕೆ ವೈರಲ್ ಆಗಿದೆ.

2023 ರ ಜನ ಸಾಹಿತ್ಯ ಸಮ್ಮೇಳನದಲ್ಲಿ ಮಾತನಾಡಿದ್ದ ಬಾನು ಮುಷ್ತಾಕ್ ಕನ್ನಡವನ್ನು ಭಾಷೆಯಾಗಿ ಬೆಳಲಿಕ್ಕೆ, ಬಾನು ಮುಷ್ತಾಕ್ ಮಾತಾಡಲಿಕ್ಕೆ, ಅವರ ಮನೆಯವರು ಮಾತಾಡಲಿಕ್ಕೆ ನೀವು ಅವಕಾಶನೇ ಕೊಡಲಿಲ್ಲ. ಕನ್ನಡರವನ್ನು ಕನ್ನಡ ಭುವನೇಶ್ವರಿಯಾಗಿ ಮಾಡ್ಬಿಟ್ರಿ. ಕೆಂಪು ಹಳದಿ ಬಾವುಟಕ್ಕೆ ಅರಿಶಿನ ಕುಂಕುಮ ಹಚ್ಚಿಬಿಟ್ರಿ’ ಎಂದು ಬಾನು ಮುಷ್ತಾಕ್ ಹೇಳಿದ್ರು.

ಅವರ ಈ ಹೇಳಿಕೆ ಈಗ ವೈರಲ್ ಆಗಿದೆ. ಸಾಕಷ್ಟು ಜನ ಸೋಷಿಯಲ್ ಮೀಡಿಯಾದಲ್ಲಿ ಅವರ ಈ ಹೇಳಿಕೆಯನ್ನು ಉಲ್ಲೇಖಿಸಿ ಕನ್ನಡಮ್ಮನ ಬಗ್ಗೆ ಈ ರೀತಿ ಹೇಳಿಕೆ ನೀಡಿರುವವರು ದಸರಾ ಉದ್ಘಾಟನೆ ಮಾಡುತ್ತಿರುವುದು ಸರಿಯೇ ಎಂದು ಪ್ರಶ್ನೆ ಮಾಡಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ