ಚಾಕುವಿನಿಂದ ಮರ್ಮಾಂಗಕ್ಕೆ ಚುಚ್ಚಿ ಬರ್ಬರ ಹತ್ಯೆ!

ಶುಕ್ರವಾರ, 9 ಸೆಪ್ಟಂಬರ್ 2022 (14:43 IST)
ಗದಗ : ಕ್ಷುಲ್ಲಕ ಕಾರಣಕ್ಕೆ ಎರಡು ಗುಂಪುಗಳ ನಡುವೆ ಘರ್ಷಣೆ ನಡೆದಿದ್ದು, ಗಲಾಟೆ ವೇಳೆ ಓರ್ವನಿಗೆ ಚಾಕು ಇರಿದು ಕೊಲೆ ಮಾಡಿರುವ ಘಟನೆ ನಗರದ ತೋಂಟದಾರ್ಯ ಮಠದ ಬಳಿ ನಡೆದಿದೆ.
 
ಚಾಕು ಇರಿತಕ್ಕೆ ಒಳಗಾದ 27 ವರ್ಷದ ಸುದೀಪ್ ಮುಂಡೆವಾಡಿ ಎಂಬ ಯುವಕ ತೀವ್ರ ರಕ್ತಸ್ರಾವದಿಂದ ಖಾಸಗಿ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾನೆ.

ಘಟನೆಗೆ ನಿಖರ ಕಾರಣ ತಿಳಿದು ಬಂದಿಲ್ಲ. ಮೃತ ಸುದೀಪ್ನ ಸ್ನೇಹಿತರಾಗಿದ್ದ ಆದಿತ್ಯ ಮುತಗಾರ ಹಾಗೂ ಐದಾರು ಜನರ ಸ್ನೇಹಿತರು ಸೇರಿ ಹಲ್ಲೆಮಾಡಿ ಕೊಲೆ ಮಾಡಿದ್ದಾರೆ. 

ನಾಲ್ಕು ಜನ ಕೈಕಾಲು ಹಿಡಿದುಕೊಂಡು ಹೊಟ್ಟೆ ಭಾಗ ಹಾಗೂ ಮರ್ಮಾಂಗಕ್ಕೆ ಓರ್ವ ಮನಬಂದಂತೆ ಚಾಕುವಿನಿಂದ ಚುಚ್ಚಿ ಹತ್ಯೆ ಮಾಡಿದ್ದಾರೆ. ನಂತರ ಆಸ್ಪತ್ರೆಗೆ ಸಾಗಿಸುವ ವೇಳೆ ಮಾರ್ಗಮಧ್ಯದಲ್ಲಿ ಸಂದೀಪ್ ಮೃತಪಟ್ಟಿದ್ದಾನೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ