ಆಧಿಕಾರ ಬೇಕು ಅಂದರೆ ಸಾಯಬೇಕಪ್ಪ: ಮೋದಿ ಸೆಕ್ಯೂರಿಟಿ ಬಗ್ಗೆ ಸಚಿವ ರಾಯರೆಡ್ಡಿ ವಿವಾದಾತ್ಮಕ ಹೇಳಿಕೆ

ಶುಕ್ರವಾರ, 21 ಏಪ್ರಿಲ್ 2017 (23:46 IST)
ಕೆಂಪು ಗೂಟದ ಕಾರು ನಿಷೇಧದ ಬಗ್ಗೆ ಕೊಪ್ಪಳದಲ್ಲಿ ಪ್ರತಿಕ್ರಿಯಿಸಿರುವ ಸಚಿವ ಬಸವರಾಜ ರಾಯರೆಡ್ಡಿ ಇದು ಕೇವಲ ಪೋಸ್ ಅಷ್ಟೇ ಇದರಿಂದ ಯಾವುದೇ ಬದಲಾವಣೆ ಬರಲ್ಲ. ವಿಐಪಿ ಸಂಸ್ಕೃತಿ ಬೇಡ ಎಂದಾದರೆ, ಮೋದಿ ಸೆಕ್ಯೂರಿಟಿ  ತೆಗೆದು ಹಾಕಲಿ ಎಂದರು. ಮೋದಿಗೆ ಭಯೋತ್ಪಾದಕರಿಂದ ಜೀವ ಬೆದರಿಕೆ ಇದೆಯಲ್ಲ ಎಂದು ವರದಿಗಾರ ಕೇಳಿದ್ದಕ್ಕೆ ಸಾಯಲಿ, ಅಧಿಕಾರ ಬೇಕೆಂದರೆ ಸಾಯ ಬೇಕಪ್ಪಾ. ಅಧಿಕಾರ ಬೇಡವೆಂದರೆ ಮನೆಯಲ್ಲೇ ಕೂರಲಿ ಎಂದು ಉತ್ತರಿಸಿದ್ದಾರೆ.

ಬಸವರಾಜ ರಾಯ ರೆಡ್ಡಿ ಹೇಳಿಕೆಗೆ ಪ್ರತಿಕ್ರಿಯಿಸಿರುವ ಬಿಜೆಪಿ ರಾಜ್ಯಾಧ್ಯಕ್ಷ ಯಡಿಯೂರಪ್ಪ, ಕೂಡಲೇ ಕ್ಷಮೆಯಾಚಿಸಬೇಕೆಂದು ಒತ್ತಾಯಿಸಿದ್ದಾರೆ. ದೇಶದ ಪ್ರಧಾನಿಗೆ ಈ ರೀತಿ ಹೇಳುವುದು ಸರಿಯಲ್ಲ ಎಂದು ಕಿಡಿ ಕಾರಿದ್ದಾರೆ.

ವಿವಿಐಪಿ ಸಂಸ್ಕೃತಿ ತೆಗೆದು ಹಾಕುವ ನಿಟ್ಟಿನಲ್ಲಿ ಇತ್ತೀಚೆಗೆ ಕೆಂಪು ಗೂಟದ ಕಾರು ಬಳಸದಂತೆ ಕೇಂದ್ರ ಸಂಪುಟ ನಿರ್ಧಾರ ಕೈಗೊಂಡಿತ್ತು. ಪ್ರಧಾನಿ, ರಾಷ್ಟ್ರಪತಿ, ನ್ಯಾಯಮೂರ್ತಿಗಳೂ ಸೇರಿ ಎಲ್ಲರಿಗೂ ಒಂದೇ ನ್ಯಾಯ  ಎಂಬ ಆದೇಶ ಹೊರಬಿದ್ದಿತ್ತು. 

ವೆಬ್ದುನಿಯಾವನ್ನು ಓದಿ