ಬಿಬಿಎಂಪಿ ಸಹಾಯ ಆಪ್ ನಿರ್ವಹಣೆಯಲ್ಲಿ ಬಿಬಿಎಂಪಿ ಫೇಲ್ಯೂರ್
ಬಿಬಿಎಂಪಿ ಕರ್ಮಕಾಂಡ ಒಂದಲ್ಲ ಎರಡಲ್ಲ. ಮೂಲಸೌಕರ್ಯಗಳ ಸಮಸ್ಯೆ ಪರಿಹಾರಕ್ಕೆ ಇರೋ ಸಹಾಯ ಆಪ್ ನಿರ್ವಹಣೆಯಲ್ಲಿ ಬಿಬಿಎಂಪಿ ಫೇಲ್ಯೂರ್ ಆಗಿದೆ.ದಾಖಲಾದ ದೂರುಗಳನ್ನ ಕ್ಲೀಯರ್ ಮಾಡದೇ ಝೀರೋ ಮಾಡಲು ಹೊರಟಿದೆ. ಸಹಾಯ ಆಪ್ ಅಲ್ಲಿ ದೂರು ದಾಖಲಾದ್ರು ಕ್ಲಿಯರ್ ಮಾಡದೇ ನಿರ್ಲಕ್ಷ್ಯ ಮಾಡ್ತಿದ್ದು. ಬಿಬಿಎಂಪಿ ಸಹಾಯ ಆ್ಯಪ್ ಕರ್ಮಕಾಂಡದ ವಿರುದ್ಧ ಬೆಂಗಳೂರಿಗರು ಆಕ್ರೋಶ ಹೊರಹಾಕ್ತಾ ಇದ್ದಾರೆ. ಬೆಂಗಳೂರು ನಗರದ ಸಾರ್ವಜನಿಕರ ಕಸದ ಸಮಸ್ಯೆ, ರಸ್ತೆಗುಂಡಿ ಸಮಸ್ಯೆ, ಚರಂಡಿ ಸಮಸ್ಯೆ, ರಾಜಕಾಲುವೆ ಸಮಸ್ಯೆ ಸೇರಿದಂತೆ ಇನ್ನಿತರ ಮೂಲಭೂತ ಸೌಕರ್ಯಗಳ ಸಮಸ್ಯೆಗಳನ್ನ ಬಿಬಿಎಂಪಿ ಗಮನಕ್ಕೆ ತರುವ ನಿಟ್ಟಿನಲ್ಲಿ ಬಿಬಿಎಂಪಿ ಸಹಾಯ ಆ್ಯಪ್ ಅನ್ನು ಬಿಡುಗಡೆ ಮಾಡ್ತು. ಸಹಾಯ ಆ್ಯಪ್1 ಸಕ್ಸಸ್ ಆಗದ ಹಿನ್ನೆಲೆ ಸಹಾಯ ಆ್ಯಪ್ 2ನಾ ಜಾರಿ ಮಾಡ್ತು. ಇದರ ಮೂಲಕ ಜನರು ಪೋಟೋ ತೆಗೆದು ಆನ್ಲೈನ್ನಲ್ಲಿ ಅಪ್ಲೋಡ್ ಮಾಡಿ ದೂರು ಸಲ್ಲಿಸಬಹುದು. ಈ ಸಹಾಯ ಆ್ಯಪ್ ನಲ್ಲಿ ಸಾಕಷ್ಟು ದೂರು ಸಲ್ಲಿಸಿದ್ರು ಬಿಬಿಎಂಪಿ ಮಾತ್ರ ದೂರುಗಳಿಗೆ ಪರಿಹಾರ ಒದಗಿಸದೇ ನಿರ್ಲಕ್ಷ್ಯ ಮಾಡ್ತಾ ಆ್ಯಪ್ ನಿರ್ವಹಣೆ ಮಾಡುವಲ್ಲಿ ಸಂಪೂರ್ಣ ವಿಫಲವಾಗಿದೆ.