ಬಿಬಿಎಂಪಿಯಿಂದ ಮತ್ತೆ ಒತ್ತುವರಿ ತೆರವು ಕಾರ್ಯಾರಂಭ

ಬುಧವಾರ, 4 ಜನವರಿ 2023 (15:16 IST)
ಹೊಸ ವರ್ಷಕ್ಕೆ ಮತ್ತೆ ಜೆಸಿಬಿ ಆರ್ಭಟ ಶುರುವಾಗಿದ್ದು ಕಂದಾಯ ಇಲಾಖೆ ಸರ್ವೆ ಕಾರ್ಯ ಮುಗಿಸಿದೆ.ಈ ತಿಂಗಳಿನಿಂದಲೇ ಒತ್ತುವರಿ ಕಾರ್ಯ ಮತ್ತೆ ಶುರುವಾಗಲಿದೆ.ಇಲ್ಲಿವರೆಗೆ ಸರ್ವೆ ನೆಪವೊಡ್ಡಿ ಬಿಬಿಎಂಪಿ ಮುಂದೂಡುತ್ತಿತ್ತು.ಇದೀಗ ಸರ್ವೆ ಮುಗಿಸಿದ ಕಂದಾಯ ಇಲಾಖೆ ಬೆಂಗಳೂರಿನ ಎಂಟು ವಲಯದಲ್ಲಿ ಶೇ.90 ರಷ್ಟು ಸರ್ವೇ ಕಾರ್ಯ ಪೂರ್ಣಗೊಳಿಸಿದೆ.
 
ಕೋರ್ಟ್ ಮೊರೆ ಹೋದ ಕೆಲ ಪ್ರಕರಣಗಳ ಸರ್ವೆ ಕಾರ್ಯ ಮಾತ್ರ ಬಾಕಿ ಇದೆ.ಕೋರ್ಟ್‌ ಮೂಲಕ ಉಳಿದ ಕೆಲ ಪ್ರಕರಣ ಸರ್ವೆ ಕಾರ್ಯ ಪೂರ್ಣ ಗೊಳಿಸಲು ಕಂದಾಯ ಇಲಾಖೆ ಮುಂದಾಗಿದ್ದು,ಇನ್ನು ಮೂರರಿಂದ ನಾಲ್ಕು ದಿನದಲ್ಲಿ  ಒತ್ತುವರಿದಾರರಿಗೆ ನೋಟೀಸ್ ನೀಡಲಾಗುತ್ತೆ.ಆಯಾ ವಲಯದ ತಹಶೀಲ್ದಾರ್ ರಿಂದ ನೋಟಿಸ್ ನೀಡಲಾಗುತ್ತೆ.ನಂತರ ಬಿಬಿಎಂಪಿಗೆ ಸರ್ವೆ ವರದಿ  ಸಲ್ಲಿಕೆ ಮಾಡುವ ಸಾಧ್ಯತೆ ಇದೆ.ಹೀಗಾಗಿ ಮತ್ತೆ ಜೆಸಿಬಿ ಘರ್ಜನೆ ಆಗುತ್ತೆ ಅಂತಾ  ಒತ್ತುವರಿದಾರರಲ್ಲಿ ಆತಂಕ ಶುರುವಾಗಿದೆ.
 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ