2017 ರಿಂದಲೂ ಮಂತ್ರಿ ಮಾಲ್ ತೆರಿಗೆ ಪಾವತಿ ಮಾಡದೆ ಬಾಕಿ ಉಳಿಸಿಕೊಂಡಿದೆ. ಬಡ್ಡಿ ಹಣವೂ ಸೇರಿ 39 ಕೋಟಿ ರೂ ಬಾಕಿಯಾಗಿದೆ. ಹಲವು ಬಾರಿ ನೋಟಿಸ್ ನೀಡಿದರೂ ಕ್ಯಾರೆ ಎನ್ನದ ಮಂತ್ರಿ ಮಾಲ್ ಆಡಳಿತ ವರ್ಗಕ್ಕೆ ಈ ಹಿಂದೆಯೂ ಬೀಗ ಹಾಕಿ ಬಿಸಿ ಮುಟ್ಟಿಸಲಾಗಿತ್ತು. ತೆರಿಗೆ ಕಟ್ಟುವುದಾಗಿ ಮುಚ್ಚಳಿಕೆ ಬರೆದುಕೊಟ್ಟ ಬಳಿಕ ತೆರೆಯಲು ಅನುಮತಿಸಿದ್ದರು. ಗುರುವಾರ ಮತ್ತೆ ತೆರಿಗೆ ಸಂಗ್ರಹ ಅಭಿಯಾನದ ಭಾಗವಾಗಿ ಬಿಬಿಎಂಪಿ ಪಶ್ಚಿಮ ವಲಯದ ಜಂಟಿ ಆಯುಕ್ತ ಶಿವಸ್ವಾಮಿ ಹಾಗೂ ಬಿಬಿಎಂಪಿ ಅಧಿಕಾರಿಗಳು ಮಂತ್ರಿ ಮಾಲ್ಗೆ ಬೀಗ ಹಾಕಿ, ಸ್ವಲ್ಪ ತೆರಿಗೆ ಪಾವತಿಸಿದ ಬಳಿಕ ತೆರೆಯಲು ಅವಕಾಶ ಕೊಟ್ಟರು.