ಅನಧಿಕೃತ ಕಟ್ಟಡ ಮಾಲೀಕರಿಗೆ ನೋಟಿಸ್ ನೀಡಲು ಬಿಬಿಎಂಪಿ ಸಜ್ಜು

ಭಾನುವಾರ, 29 ಜನವರಿ 2023 (17:41 IST)
ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಹೈಟೆನ್ಷನ್ ವೈಯ ರ್ ಗಳಿಂದಾಗಿ ಸಾವು ನೋವುಗಳ ಸಮಸ್ಯೆ ಜಾಸ್ತಿ ಆಗ್ತಾಯಿದೆ. ಈ ಸಮಸ್ಯೆಗೆ ಪರಿಹಾರ ಒದಗಿಸುವ ನಿಟ್ಟಿನಲ್ಲಿ ಬಿಬಿಎಂಪಿ ಮತ್ತು ಬೆಸ್ಕಾಂ ಎಚ್ಚೇತ್ತಕೊಂಡಂತೆ ಕಾಣ್ತಾ ಇದೆ. ಅನಧಿಕೃತ ಕಟ್ಟಡ ಮಾಲೀಕರಿಗೆ ಬಿಸಿ ಮುಟ್ಟಲಿಕ್ಕೆ ಬಿಬಿಎಂಪಿ ಸಜ್ಜಾಗಿದೆ. 
 
 ಹೈಟೆನ್ಶನ್ ವೈಯರ್ ನಿಂದಾಗಿ ಬಾಲಕನೊಬ್ಬ ದಾರುಣವಾಗಿ ಸಾವನ್ನಪ್ಪಿದ ನಂತರ ಬೆಸ್ಕಾಂ ಹಾಗೂ ಬಿಬಿಎಂಪಿ ಎಚ್ಚೆತ್ತುಕೊಂಡಿದೆ. ಹೈ ಟೆನ್ಶನ್ ಹಾದು ಹೋಗಿರುವ 10,000 ಮನೆ ನಗರದಲ್ಲಿ ಇದೆ ಎಂದು ಬೆಸ್ಕಾಂ ನಿಂದ ಬಿಬಿಎಂಪಿಗೆ ಮಾಹಿತಿಯನ್ನ ನೀಡಲಾಗಿದೆಯಂತೆ  ಕೂಡಲೇ  ನೋಟಿಸ್ ಕೊಟ್ಟು ಅನಧಿಕೃತ ಮನೆಗಳನ್ನ ತೆರವು ಮಾಡಿ ಅಂತ ಬೆಸ್ಕಾಂ ಬಿಬಿಎಂಪಿ ಗೆ ಮನವಿಯನ್ನ ಮಾಡ್ಕೊಂಡಿದೆ.
 
 ಫೈ ಟೆನ್ಷನ್ ವಯರ್ ಹಾದು ಹೋಗುವ ಭಾಗದಲ್ಲಿ ಅನಧಿಕೃತ ಕಟ್ಟಡ ಆರೋಪ ಕೇಳು ಬಂದ ಹಿನ್ನೆಲೆ ಬೆಸ್ಕಾಂ ಈಗ ಹೈಟೆನ್ಷನ್ ಕೆಳಗೆ ಕೊಟ್ಟಿರುವ ಮನೆಗಳ ಲೆಕ್ಕ ಹಾಕಿದ್ಯಂತೆ  ಬೆಸ್ಕಾಂ ಪ್ರಕಾರ ಹೈಟೆನ್ಷನ್ ವಯರ್ ಹಾದು ಹೋಗುವ ಜಾಗದಲ್ಲಿ  10,000 ಮನೆಗಳು ಇವೆಯಂತೆ. ಇವೆಲ್ಲವನ್ನೂ ತೆರವು ಮಾಡಲು ಬೆಸ್ಕಾಂ ಬಿಬಿಎಂಪಿ ಗೆ ಮನವಿ ಮಾಡಲಾಗಿದೆ.
 
 ವಿ ಖಾತಾ ಸೈಟ್ ನಲ್ಲಿ  ಗ್ರೌಂಡ್ ಪ್ಲಸ್ ಎರಡು ಸೇರಿದಂತೆ ಮೂರು ಅಂತಸ್ತಿಗೆ ಮಾತ್ರ ಅವಕಾಶ ಆದ್ರೆ ನಗರದ ಹಲವೆಡೆ ಅದಕ್ಕೂ ಮೀರಿ ಅಂತಸ್ತು ಕಟ್ಟಿಸಿಕೊಳ್ಳಲಾಗಿದೆ. ಯಾರು ಬಿಬಿಎಂಪಿ ಕಾನೂನು ಉಲ್ಲಂಘಸಿ ಕಟ್ಟಡ ಕಟ್ಟಿದ್ದರೋ ಅಂತವರಿಗೆ ನೋಟಿಸ್ ನೀಡಿ ಕ್ರಮ ಕೈಗೊಳ್ಳಲಾಗುತ್ತೆ.
 
 ಬೆಸ್ಕಾಂ ಲೆಕ್ಕದ ಪ್ರಕಾರ 10,000 ಮನೆಗಳ ಸರ್ವೆ ದಾಖಲೆಗಳ ಪರಿಶೀಲನೆಗೆ ಬಿಬಿಎಂಪಿ ಮುಂದಾಗ್ತಾ ಇದೆ ಈ ಸಂಬಂಧ ಎಲ್ಲಾ ವಲಯ ಚೀಫ್ ಇಂಜಿನಿಯರಿಂಗ್ ಗಳಿಗೆ ಪಾಲಿಕೆಯಿಂದ ಉಸ್ತುವಾರಿ ನೀಡಿ ತ್ವರಿತಗತಿಯಲ್ಲಿ ಬೆಸ್ಕಾಂ ಪಟ್ಟಿ ಸರ್ವೆ ಮಾಡಿ ಮಾಹಿತಿ ದಾಖಲಿಸುವಂತೆ  ಪಾಲಿಕೆ ಇಂಜಿನಿಯರಿಂಗ್ ಗಳಿಗೆ  ತಾಕೀತು ಮಾಡಿದೆ.
 
ಜನರು ಕಾನೂನು ಮೀರಿ ಹೆಚ್ಚು ಅಂತಸ್ತು ಕಟ್ಟಡ ನಿರ್ಮಾಣ ಮಾಡಿರೋದ್ರಿಂದ ಅವಘಡ ಆಗ್ತಾ ಇದೆ. ಹೀಗಾಗಿ ಆ ರೀತಿ ಕಟ್ಟಡಗಳನ್ನ ತೆರವು ಮಾಡಿ ಅವಘಡಗಳನ್ನ ಅಪಾಯ ತಪ್ಪಿಸುವ ನಿಟ್ಟಿನಲ್ಲಿ ಕ್ರಮ ತೆಗೆದುಕೊಳ್ಳಿ ಅಂತ ಬೆಸ್ಕಾಂ ಬಿಬಿಎಂಪಿ ಗೆ ಮನವಿ ಮಾಡಿದೆ 
 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ