ಬಿ ಡಿ ಎ ನಿವೇಶನ ಪಡೆಯುವವರು ಹುಷಾರು..!!

ಬುಧವಾರ, 28 ಸೆಪ್ಟಂಬರ್ 2022 (16:58 IST)
ಸಂಜೆಯ ವೇಳೆಗೆ ಖಾಲಿ ನಿವೇಶನಗಳು ವೇಶ್ಯಾವಾಟಿಕೆ, ಗಾಂಜಾ ಮತ್ತು ಮದ್ಯಪಾನಕ್ಕೆ ಹೇಳಿ ಮಾಡಿಸಿದ ಜಾಗವಾಗಿ ಮಾರ್ಪಾಡಾಗುತ್ತಿರುವುದರಿಂದ ಇಲ್ಲಿ ಬದುಕಲು ದಿನನಿತ್ಯ ಹೋರಾಟ ಮಾಡಬೇಕಿದೆ ಎಂದು ಕುಟುಂಬ ಅಳಲು ತೋಡಿಕೊಂಡಿದೆ. 1986 ರಿಂದ ಇಲ್ಲಿ ಬಿಡಿಎ ಸೈಟ್ಗಾಗಿ ಪ್ರಯತ್ನಿಸಿದ ನಂತರ, ಮನೆ ಮಾಲೀಕ ಸುಬ್ರಹ್ಮಣ್ಯ ರೆಡ್ಡಿ ಅವರು 1998 ರಲ್ಲಿ ತಮ್ಮ 8ನೇ ಪ್ರಯತ್ನದಲ್ಲಿ ನಿವೇಶನವನ್ನು ಪಡೆಯುವಲ್ಲಿ ಯಶಸ್ವಿಯಾಗಿದ್ದರು. ಬಳಿಕ 2017ರಲ್ಲಿ ತಮ್ಮ ಮನೆಯನ್ನು ನಿರ್ಮಿಸಿದರು. ಅದಕ್ಕೂ ಮೊದಲು ಅಥವಾ ನಂತರ ಹೆಣ್ಣೂರು ಮುಖ್ಯರಸ್ತೆಯಲ್ಲಿನ ಈ ಬ್ಲಾಕ್ನಲ್ಲಿ ಬೇರೆ ಯಾವುದೇ ಮನೆಯೂ ನಿರ್ಮಾಣವಾಗಿಲ್ಲ.

ಸುತ್ತಲೂ ನಾಯಿಕೊಡೆಗಳಂತೆ ಬೆಳೆದಿರುವ ಕಳೆ ಗಿಡಗಳಿಂದಾಗಿ ಹಸಿರಿನ ಮಧ್ಯೆ ಈ ಮನೆಗೆ ರಮಣೀಯವಾದ ವಾತಾವರಣವನ್ನು ನೀಡುತ್ತವೆ. ಆದರೆ, ಇಲ್ಲಿರುವುದು ಒಂದೇ ಒಂದು ಮನೆ. ಏರೋಸ್ಪೇಸ್ ಇಂಜಿನಿಯರ್ ಆಗಿರುವ ಯೋಗ ಶಿಕ್ಷಕರಾಗಿರುವ ರೆಡ್ಡಿ ಅವರು, 'ಇತ್ತೀಚೆಗೆ ತಮ್ಮ ಗರ್ಭಿಣಿ ಸೊಸೆ ಮನೆಗೆ ಹಿಂದಿರುಗುವಾಗ ದುಷ್ಕರ್ಮಿಗಳು ಲೇಔಟ್ನೊಳಗೆ ಬೆನ್ನಟ್ಟಿ ಬಂದಿದ್ದರು. ಈ ವೇಳೆ ಆಕೆ ಕೆಳಗೆ ಬಿದ್ದು, ಸಣ್ಣ ಗಾಯಗಳಾದವು.

ಆಕೆಯ ಕಿರುಚಾಟ ಕೇಳಿ ಯಾರೋ ಸಹಾಯಕ್ಕೆ ಧಾವಿಸಿದ್ದು, ದಾಳಿಕೋರ ಪರಾರಿಯಾಗಿದ್ದಾನೆ. ಬಳಿಕ ಪೊಲೀಸರಿಗೆ ದೂರು ನೀಡಿದ್ದೆವು. ನಮ್ಮಲ್ಲಿ ಯಾರಿಗೂ ಸುರಕ್ಷತೆ ಇಲ್ಲ' ಎಂದು ಟಿಎನ್ಐಇಗೆ ತಿಳಿಸಿದ್ದಾರೆ. 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ