ಹೀಗೂ ಕಳ್ಳತನ ಮಾಡ್ತಾರೆ ಹುಷಾರ್..!

ಶುಕ್ರವಾರ, 14 ಜುಲೈ 2023 (11:29 IST)
ಬೆಂಗಳೂರು : ಮಹಾನಗರಕ್ಕೆ ಬಂದು ಬಾಡಿಗೆ ಮನೆಯಲ್ಲಿರುವ ಯುವಕರೇ ಹುಷಾರು, ನಕಲಿ ಪೊಲೀಸರ ಹಾವಳಿ ಹೆಚ್ಚಾಗಿದೆ.
 
ಹೌದು ನಾವು ಪೊಲೀಸರೆಂದು ಹೇಳಿ ಯುವಕರಿದ್ದ ಬಾಡಿಗೆ ಮನೆಗೆ ನುಗ್ಗಿ ಸುಲಿಗೆ ಮಾಡಿದ ಘಟನೆ ಬೆಂಗಳೂರಿನ ವಿದ್ಯಾರಣ್ಯಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ನಿಮ್ಮ ರೂಂನಲ್ಲಿ ಡ್ರಗ್ಸ್ ಸೇವಿಸುವ ಬಗ್ಗೆ ಮಾಹಿತಿಯಿದೆ, ಪರಿಶೀಲನೆ ನಡೆಸಬೇಕೆಂದು ಒಳಗಡೆ ಬಂದಿದ್ದಾರೆ.

ಮನೆಯಲ್ಲಿ ಏನೂ ಬೆಲೆ ಬಾಳುವ ವಸ್ತುಗಳು ಸಿಗದ ಕಾರಣ ನಾಲ್ವರು ಯುವಕರಿಗೆ ಚಾಕು ತೋರಿಸಿ ಕೈಯಲ್ಲಿದ್ದ ಉಂಗುರ, ಇತರೆ ವಸ್ತುಗಳನ್ನು ದೋಚಿದ್ದಾರೆ. ಅಷ್ಟೇ ಅಲ್ಲದೆ ಫೋನ್ ಪೇ ಮೂಲಕ 13 ಸಾವಿರ ಹಣವನ್ನ ಅಕೌಂಟ್ಗೆ ಹಾಕಿಸಿಕೊಂಡು ಪರಾರಿಯಾಗಿದ್ದಾರೆ. ಈ ಕುರಿತು ವಿದ್ಯಾರಣ್ಯಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಈ ಕುರಿತು ಖದೀಮರಿಗಾಗಿ ಬಲೆ ಬೀಸಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ