ಬೇಸಿಗೆ ಬರುವ ಮೊದಲೇ ರಾಜ್ಯದಲ್ಲಿ ಕತ್ತಲು ರಾಜ್ಯ!

ಬುಧವಾರ, 15 ಫೆಬ್ರವರಿ 2017 (11:51 IST)
ಬೆಂಗಳೂರು: ಬೇಸಿಗೆ ಇನ್ನೂ ಬಂದಿಲ್ಲ. ಆಗಲೇ ರಾಜ್ಯದಲ್ಲಿ ವಿದ್ಯುತ್ ಕಣ್ಣಾ ಮುಚ್ಚಾಲೆ ಆರಂಭವಾಗಿದೆ. ಬೆಂಗಳೂರಿನಂತಹ ನಗರ ಪ್ರದೇಶದಲ್ಲೇ ಈಗಲೇ ಪರಿಸ್ಥಿತಿಯಾದರೆ, ಇನ್ನು ಬೇಸಿಗೆಯಲ್ಲಿ ಇನ್ಯಾವ ಪರಿಯಿರಬಹುದು ನೀವೇ ಊಹಿಸಿ.

 
ಇತ್ತೀಗೆಷ್ಟೇ ಇಂಧನ ಸಚಿವ ಶಿವಕುಮಾರ್,  ಬೇಸಿಗೆಯಲ್ಲಿ ಈ ಬಾರಿ ವಿದ್ಯುತ್ ಕೈ ಕೊಡಬಹುದು. ಆದರೂ ಅಗತ್ಯ ಕ್ರಮ ಕೈಗೊಳ್ಳುತ್ತೇವೆ. ವಿದ್ಯುತ್ ಅಭಾವವಾಗದಂತೆ ನೋಡಿಕೊಳ್ಳುತ್ತೇವೆ ಎಂದಿದ್ದರು.

ಆದರೆ ಈಗ ಬೆಸ್ಕಾಂ ರಿಪೇರಿ ನೆಪದಲ್ಲಿ ದಿನವಿಡೀ ವಿದ್ಯುತ್ ನೀಡದೇ ಉಳಿತಾಯ ಯೋಜನೆ ಮಾಡುತ್ತಿದೆ! ಕಳೆದ ಒಂದು ವಾರದಿಂದ ಬೆಂಗಳೂರಿನ ಕೆಲವೆಡೆ ರಿಪೇರಿ ನೆಪದಲ್ಲಿ ದಿನವಿಡೀ ವಿದ್ಯುತ್ ಕೈ ಕೊಡುತ್ತಿರುವುದು ಸಾಮಾನ್ಯವಾಗಿದೆ. ಇದರಿಂದ ದೈನಂದಿನ ಕೆಲಸಗಳಿಗೆ ತೊಂದರೆಯಾಗುತ್ತಿದೆ. ಅಲ್ಲದೆ ಇನ್ನು ಕೆಲವೇ ದಿನಗಳಲ್ಲಿ ವಿದ್ಯಾರ್ಥಿಗಳಿಗೆ ಪರೀಕ್ಷೆಯೂ ಬರಲಿದ್ದು, ಹೀಗೇ ಮುಂದುವರಿದರೆ ಕಷ್ಟವಾಗಲಿದೆ.  

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ