ಬೆಲೆಕೇರಿ ಅದಿರು ಕೇಸ್: ಶಾಸಕ ಸತೀಶ್ ಸೈಲ್ ಗೆ ಶಿಕ್ಷೆ ಇಂದು ಪ್ರಕಟ

Krishnaveni K

ಶನಿವಾರ, 26 ಅಕ್ಟೋಬರ್ 2024 (09:21 IST)
Photo Credit: X
ಬೆಂಗಳೂರು: ಬೆಲೆಕೇರಿ ಅದಿರು ನಾಪತ್ತೆ ಪ್ರಕರಣದಲ್ಲಿ ಶಾಸಕ ಸತೀಶ್ ಸೈಲಿ ಮತ್ತು ಇತರರ ಶಿಕ್ಷೆ ಪ್ರಮಾಣ ಇಂದು ಪ್ರಕಟವಾಗಲಿದೆ. ಪ್ರಕರಣದ ವಿಚಾರಣೆ ನಡೆಸಿದ ವಿಶೇಷ ಜನಪ್ರತಿನಿಧಿಗಳ ಕೋರ್ಟ್ ಇಂದಿಗೆ ತೀರ್ಪು ಕಾಯ್ದಿರಿಸಿದೆ.

ಕಾರವಾರದ ಶಾಸಕ ಸತೀಶ್ ಸೈಲ್, ಅಂದಿನ ಬಂದರು ಅಧಿಕಾರಿ ಮಹೇಶ್ ಬಿಳಿಯ ಸೇರಿ 7 ಮಂದಿ ದೋಷಿಗಳು ಎಂದು ನ್ಯಾ. ಸಂತೋಷ್ ಗಜಾನನ ಭಟ್ ಎಂದು ಗುರುವಾರ ತೀರ್ಪು ಪ್ರಕಟಿಸಿದ್ದರು. ಆದರೆ ಶಿಕ್ಷೆಯ ಪ್ರಮಾಣ ಪ್ರಕಟವಾಗಿರಲಿಲ್ಲ. ಅದನ್ನು ಇಂದು ನ್ಯಾಯಾಧೀಶರು ಪ್ರಕಟಿಸಲಿದ್ದಾರೆ.

ಎಲ್ಲಾ ಆರೋಪಿಗಳಿಗೆ ಗರಿಷ್ಠ ಜೈಲು ಶಿಕ್ಷೆ ಮತ್ತು ದಂಡ ವಿಧಿಸಬೇಕು ಎಂದು ಸಿಬಿಐ ಆಗ್ರಹಿಸಿತ್ತು. ಬೆಲೆಕೇರಿ ಅದಿರು ನಾಪತ್ತೆ ಪ್ರಕರಣಕ್ಕೆ ಸಂಬಂಧಿಸಿದಂತೆ ಒಟ್ಟು 6 ಪ್ರಕರಣ ದಾಖಲಾಗಿತ್ತು. ಎಲ್ಲಾ ಪ್ರಕರಣಗಳಲ್ಲಿ ಸತೀಶ್ ಸೈಲ್ ಮತ್ತು ಇತರೆ ಆರೋಪಿಗಳು ದೋಷಿ ಎಂದು ಕೋರ್ಟ್ ತೀರ್ಮಾನಕ್ಕೆ ಬಂದಿದೆ.

ಸಿಬಿಐ ಪರ ವಾದ ಮಂಡಿಸಿದ ಹಿರಿಯ ವಕೀಲೆ ಕೆಎಸ್ ಹೇಮಾ, ಆರೋಪಿಗಳು 3,100 ಮೆಟ್ರಿಕ್ ಟನ್ ಅದಿರು ಕಳ್ಳ ಸಾಗಣಿಕೆಯಲ್ಲಿ ಭಾಗಿಯಾಗಿದ್ದರು. ಇದರಿಂದ ಸರ್ಕಾರಕ್ಕೆ 250 ಕೋಟಿ ರೂ. ನಷ್ಟವಾಗಿದೆ ಎಂದಿದ್ದಾರೆ. ಇನ್ನೊಂದೆಡೆ ಸತೀಶ್ ಸೈಲ್ ಪರ ವಕೀಲರು ಕಳ್ಳತನ, ಭ್ರಷ್ಟಾಚಾರ ಕಾಯ್ದೆಯಡಿ ಗರಿಷ್ಠ ಶಿಕ್ಷೆ 3 ವರ್ಷ ಮಾತ್ರವಾಗಿದೆ. ಇಷ್ಟು ಮಾತ್ರ ಶಿಕ್ಷೆ ನೀಡಬೇಕು ಎಂದು ವಾದ ಮಂಡಿಸದೆ. ಸದ್ಯಕ್ಕೆ ಆರೋಪಿಗಳೆಲ್ಲರೂ ಪರಪ್ಪನ ಅಗ್ರಹಾರ ಜೈಲಿನಲ್ಲಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ