ಮಗುವನ್ನು ರಕ್ಷಿಸಿದ ಗಂಟೆ ಹೂಗಳು..!

ಭಾನುವಾರ, 5 ಮಾರ್ಚ್ 2023 (16:07 IST)
ಉತ್ತರ ಪ್ರದೇಶ ರಾಜ್ಯದಲ್ಲಿ ಆಶ್ಚರ್ಯಕಾರಿ ಘಟನೆ ಬೆಳಕಿಗೆ ಬಂದಿದೆ. ಬಡುವಾನ್ ಜಿಲ್ಲೆಯಲ್ಲಿ 20 ಅಡಿ ಆಳದ ಬಾವಿಗೆ ಎಸೆಯಲ್ಪಟ್ಟ ನವಜಾತ ಶಿಶುವನ್ನು ರಕ್ಷಿಸಿದ ಬೆನ್ನಲ್ಲೇ, ಬರೇಲಿ ಜಿಲ್ಲೆಯ ಕಟೂವಾ ಗ್ರಾಮದ ಕೆರೆಯೊಂದಕ್ಕೆ ಎಸೆಯಲ್ಪಟ್ಟ ಎರಡು ದಿನಗಳ ಹೆಣ್ಣು ಮಗುವೊಂದು ಪವಾಡ ಸದೃಶ್ಯವಾಗಿ ಬದುಕಿ ಬಂದಿರುವ ಘಟನೆ ಬೆಳಕಿಗೆ ಬಂದಿದೆ. ಆಳವಾದ ನೀರಿನಲ್ಲಿ ಮಗುವಿನ ಕೊರಳು ಕಂಡುಬಂದ ತಕ್ಷಣ ಸ್ಥಳೀಯರು ಪೊಲೀಸರಿಗೆ ಸುದ್ದಿ ಮುಟ್ಟಿಸಿದರು. ಕೆರೆ ದಂಡೆಯಿಂದ ಹದಿನೈದು ಅಡಿ ಆಳದಲ್ಲಿ ಇದ್ದ ಮಗು ಎಸೆಯಲ್ಪಟ್ಟಾಗ, ಕೆರೆಯಲ್ಲಿದ್ದ ಗಂಟೆ ಹೂವುಗಳ ರಾಶಿ ಮಗುವನ್ನು ಮುಳುಗದಂತೆ ರಕ್ಷಿಸಿದೆ. ಮಗುವನ್ನು ಆ ಬಳಿಕ ಸುರಕ್ಷಿತವಾಗಿ ಹೊರಕ್ಕೆ ತರಲಾಯಿತು. ಪೊಲೀಸರು ತಕ್ಷಣ ಮಗುವನ್ನು ನವಾಬ್‌ಗಂಜ್ ಸಮುದಾಯ ಆರೋಗ್ಯ ಕೇಂದ್ರಕ್ಕೆ ಕರೆದೊಯ್ದು ಸೂಕ್ತ ಚಿಕಿತ್ಸೆ ನೀಡುತ್ತಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ