ಬಿಜೆಪಿ ಪಕ್ಷಕ್ಕೆ ಸೇರಿರುವುದೇ ನನಗೆ ಸ್ಥಾನಮಾನ: ಚಲುವರಾಯಸ್ವಾಮಿ ಹೇಳಿಕೆಗೆ ಸುಮಲತಾ ಅಂಬರೀಶ್‌ ಕೌಂಟರ್‌

Sampriya

ಶುಕ್ರವಾರ, 22 ನವೆಂಬರ್ 2024 (19:17 IST)
ಮಂಡ್ಯ:  ʻಸ್ಥಾನಮಾನಕ್ಕಾಗಿ ಸುಮಲತಾ ಪ್ರತಿಭಟನೆಯಲ್ಲಿ ಭಾಗಿಯಾಗಿದ್ದಾರೆʼ ಎಂಬ ಸಚಿವ ಚಲುವರಾಯಸ್ವಾಮಿ ಹೇಳಿಕೆಗೆ  ಮಾಜಿ ಸಂಸದ ಸುಮಲತಾ ಅವರು ವಕ್ಫ್‌ ವಿರೋಧಿಸಿ ಮಂಡ್ಯದಲ್ಲಿ ಬಿಜೆಪಿ ನಡೆಸಿದ ಪ್ರತಿಭಟನೆಯಲ್ಲಿ ಭಾಗಿಯಾಗಿ ತಿರುಗೇಟು ನೀಡಿದ್ದಾರೆ.

ಕ್ಷೇತ್ರ ಬಿಟ್ಟುಕೊಟ್ಟು ಬಿಜೆಪಿ ಸೇರಿದವಳು ನಾನು. ನಾವು ಯಾವುದಕ್ಕೂ ಆಸೆ ಮಾಡುವ ಕುಟುಂಬವಲ್ಲ. ನಮ್ಮದು ತ್ಯಾಗ ಮಾಡಿರುವ ಕುಟುಂಬ ಎಂದು ಕೌಂಟರ್ ನೀಡಿದರು.

ಚಲುವರಾಯಸ್ವಾಮಿ ಅವರು ಏನು ಬೇಕಾದ್ರೂ ಹೇಳಿಕೊಳ್ಳಲಿ, ಬಿಜೆಪಿ ಪಕ್ಷಕ್ಕೆ ಸೇರಿರುವುದೇ ನನಗೆ  ಸ್ಥಾನಮಾನ. ಮೋದಿ ಹಿಂದೆ ನಾವಿದ್ದೇವೆ. ಅವರ ಕೆಳಗೆ ಕೆಲಸ ಮಾಡುತ್ತಿರುವುದೇ ನಮಗೆ ಗೌರವ. ಮೋದಿ ಸರ್ಕಾರದ ಯೋಜನೆಯನ್ನ ಜನರಿಗೆ ತಲುಪಿಸುವ ಆಸೆ ಇದೆ. ಯಾವುದೇ ವೈಯಕ್ತಿಕ ಆಸೆ ನಮಗಿಲ್ಲ. ವೈಯಕ್ತಿಕ ಆಸೆಗಾಗಿ ರಾಜಕಾರಣ ಮಾಡುವವರ ಲೀಸ್ಟ್ ನಮ್ಮ ಮುಂದೆ ಇದೆ ಎಂದು ಕುಟುಕಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ