ಆನ್ ಲೈನ್ ನಲ್ಲಿ ವಸ್ತು ಆರ್ಡರ್ ಮಾಡಿದರೆ ಮನೆಗೆ ಬಂದಿದ್ದು ಕಿಂಗ್ ಕೋಬ್ರಾ ಹಾ ವು
ಅಮೆಝೋನ್ ನಲ್ಲಿ ಬೆಂಗಳೂರಿನ ದಂಪತಿ ವಸ್ತುವೊಂದನ್ನು ಆರ್ಡರ್ ಮಾಡಿದ್ದರು. ಎಕ್ಸ್ ಬಾಕ್ಸ್ ಕಂಟ್ರೋಲರ್ ನ್ನು ದಂಪತಿ ಆರ್ಡರ್ ಮಾಡಿದ್ದರು. ಅದರಂತೆ ಅವರು ಹೇಳಿದ ದಿನಕ್ಕೆ ಎಕ್ಸ್ ಬಾಕ್ಸ್ ಕಂಟ್ರೋಲರ್ ಅವರು ನೀಡಿದ್ದ ವಿಳಾಸಕ್ಕೆ ಡೆಲಿವರಿಯಾಗಿತ್ತು.
ಆದರೆ ಖುಷಿಯಿಂದಲೇ ಬಾಕ್ಸ್ ಓಪನ್ ಮಾಡಲು ಹೊರಟ ದಂಪತಿಗೆ ಆಘಾತವಾಗಿದೆ. ಯಾಕೆಂದರೆ ಬಾಕ್ಸ್ ನಲ್ಲಿ ತಾವು ಆರ್ಡರ್ ಮಾಡಿದ ವಸ್ತುವಿನ ಜೊತೆಗೆ ಒಂದು ಹಾವು ಬೆಚ್ಚಗೆ ಮಲಗಿತ್ತು! ಬಾಕ್ಸ್ ಗೆ ಹಾಕಲಾಗಿದ್ದ ಗಮ್ ಟೇಪ್ ಗೆ ಹಾವು ಅಂಟಿಕೊಂಡಿತ್ತು. ಹೀಗಾಗಿ ಅದಕ್ಕೆ ತಪ್ಪಿಸಿಕೊಳ್ಳಲು ಸಾಧ್ಯವಾಗಿರಲಿಲ್ಲ.
ಇದನ್ನು ನೋಡಿದರೆ ಅದು ಕಾಳಿಂಗ ಸರ್ಪದ ಮರಿಯ ರೀತಿಯಿತ್ತು. ಹಾವು ಕಂಡ ದಂಪತಿಗೆ ಗಾಬರಿಯಾಗಿದೆ. ಬಾಕ್ಸ್ ನ ಗಮ್ ಟೇಪ್ ಗೆ ಹಾವು ಅಂಟಿಕೊಂಡಿದ್ದರಿಂದ ಬಾಕ್ಸ್ ಓಪನ್ ಮಾಡುವಾಗ ಅದು ಯಾವುದೇ ತೊಂದರೆ ಮಾಡಲಿಲ್ಲ. ಈ ಫೋಟೋಗಳು ಈಗ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.