ಪಾರ್ಟಿಗೆ ಕರೆದೊಯ್ದು ಮಾದಕ ವಸ್ತು ನೀಡಿ ಗ್ಯಾಂಗ್ ರೇಪ್, ಹನಿಟ್ರ್ಯಾಪ್ ಆರೋಪಿ ಫ್ರೆಂಡ್ಸ್ ವಿರುದ್ಧ ಕೇಸ್
ಸಂತ್ರಸ್ತೆಗೆ ಗುಲಾಬಿ ಬಣ್ಣದ ಟ್ಯಾಬ್ಲೆಟ್ ನೀಡಿ ಪ್ರಜ್ಞಾಹೀನ ಸ್ಥಿತಿಯಲ್ಲಿದ್ದಾಗ ಲೈಂಗಿಕ ದೌರ್ಜನ್ಯ ಎಸಗಲಾಗಿದೆ ಎಂದು ಯುವತಿ ಆರೋಪಿಸಿದ್ದಾಳೆ.
ಪಾರ್ಟಿಯೊಂದಕ್ಕೆ ಕರೆದೊಯ್ದ ನನ್ನ ಮೇಲೆ ಅತ್ಯಾಚಾರ ಎಸಗಲಾಗಿದೆ ಎಂದು ಆರೋಪಿಸಿ ಬೆಂಗಳೂರಿನ ಅಮೃತಹಳ್ಳಿ ಠಾಣೆಗೆ ದೂರನ್ನು ನೀಡಲಾಗಿದೆ. ಈ ಸಂಬಂಧ ನಿಖಿಲ್ ಮತ್ತು ಡಿಕ್ಸನ್ ಸಾಂಡ್ರಾ ಎಂಬ ಇಬ್ಬರ ವಿರುದ್ಧ ಫೆ.22ರಂದು ಎಫ್ಐಆರ್ ದಾಖಲಾಗಿದೆ.