Bengaluru Viral video: ಆಕ್ಷನ್ ಸಿನಿಮಾ ಚೇಸಿಂಗ್ ರೀತಿ ಉರುಳಿಬಂತು ಟ್ಯಾಂಕರ್: ಡೆಡ್ಲಿ ಆಕ್ಸಿಡೆಂಟ್ ಹೇಗಾಯ್ತು ನೋಡಿ

Krishnaveni K

ಮಂಗಳವಾರ, 15 ಏಪ್ರಿಲ್ 2025 (13:49 IST)
Photo Credit: X
ಬೆಂಗಳೂರು: ಆಕ್ಷನ್ ಸಿನಿಮಾಗಳಲ್ಲಿ ಟ್ರಕ್ ಪಲ್ಟಿ ಹೊಡೆಯುವಂತಿದೆ ಬೆಂಗಳೂರಿನ ವೈಟ್ ಫೀಲ್ಡ್ ಬಳಿ ನಡೆದ ಅಪಘಾತವೊಂದರ ದೃಶ್ಯ. ಈ ವಿಡಿಯೋ ಈಗ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

ಸೋಮವಾರ ಘಟನೆ ನಡೆದಿದೆ ಎನ್ನಲಾಗಿದೆ. ಬೆಂಗಳೂರಿನ ವೈಟ್ ಫೀಲ್ಡ್ ಸಮೀಪ ಟ್ರಕ್ ಚಾಲಕನ ನಿಯಂತ್ರಣ ತಪ್ಪಿ ಟ್ರಕ್ ಪಲ್ಟಿ ಹೊಡೆದಿದೆ. ಎದುರು ಬರುತ್ತಿದ್ದ ಕಾರನ್ನು ಓವರ್ ಟೇಕ್ ಮಾಡಲು ಹೋದಾಗ ಘಟನೆ ನಡೆದಿದೆ ಎನ್ನಲಾಗಿದೆ.

ಚಾಲಕನ ನಿಯಂತ್ರಣ ತಪ್ಪಿದ ಟ್ರಕ್ ಪಲ್ಟಿಯಾಗಿ ಧೂಳೆಬ್ಬಿಸುತ್ತಾ ಕಾರನ್ನೇ ಹಿಂಬಾಲಿಸುತ್ತದೆ. ಎದುರಿದ್ದ ಕಾರು ಅನಾಹುತ ತಪ್ಪಿಸಿಕೊಳ್ಳಲು ವೇಗವಾಗಿ ಚಲಾಯಿಸಿ ಮುಂದೆ ಬಂದಿದ್ದರಿಂದ ಪಾರಾಗುತ್ತಾನೆ.

ಇದೆಲ್ಲವೂ ಇದಕ್ಕಿಂತ ಮುಂದೆ ಸಾಗುತ್ತಿದ್ದ ಕಾರಿನ ಡ್ಯಾಶ್ ಬೋರ್ಡ್ ಕ್ಯಾಮರಾದಲ್ಲಿ ಸೆರೆಯಾಗಿತ್ತು. ಘಟನೆಯಲ್ಲಿ ಟ್ರಕ್ ನಲ್ಲಿದ್ದ ಇಬ್ಬರಿಗೆ ಗಾಯಗಳಾಗಿದ್ದು ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ತಿಳಿದುಬಂದಿದೆ.

#Bengaluru :

pic.twitter.com/dLevXSm2Ap

— Surya Reddy (@jsuryareddy) April 15, 2025

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ