ಕರ್ನಾಟಕದಲ್ಲಿ ಹಿಜಾಬ್ ನಂತರ ಬೈಬಲ್ ವಿವಾದ!

ಸೋಮವಾರ, 25 ಏಪ್ರಿಲ್ 2022 (16:07 IST)

ಬೆಂಗಳೂರಿನ ಕ್ಲಾರೆನ್ಸ್ ಆಂಗ್ಲ ಮಾಧ್ಯಮ ಶಾಲೆಯ ಆಡಳಿತ ಮಂಡಳಿ ಶಾಲೆಯ ಆವರಣದಲ್ಲಿ ಹೋಲಿ ಬೈಬಲ್ ಪುಸ್ತಕ ಹೊಂದಲು ತಕರಾರು ಇಲ್ಲ ಎಂದು ಪೋಷಕರು ಬರೆದುಕೊಡಬೇಕು ಎಂದು ಸೂಚಿಸಿದೆ. ಈ ವಿಷಯ ಇದೀಗ ಹೊಸ ವಿವಾದಕ್ಕೆ ನಾಂದಿ ಹಾಡಿದೆ.

ಶಾಲೆಯ ಆಡಳಿತ ಮಂಡಳಿ ಕ್ರಿಶ್ಚಿಯನೇತರ ವಿದ್ಯಾರ್ಥಿಗಳು ಬೈಬಲ್ ಪುಸ್ತಕ ಹಿಡಿದುಕೊಳ್ಳಲು ಪ್ರಚೋದಿಸಲು ಹೀಗೆ ಮಾಡಿದೆ ಎಂದು ಶಾಲಾ ಆಡಳಿತ ಮಂಡಳಿಯ ಈ ನಿಲುವಿಗೆ ಹಿಂದೂ ಜನಜಾಗೃತಿ ಸಮಿತಿ ರಾಜ್ಯಾಧ್ಯಕ್ಷ ಮೋಹನ್ ಗೌಡ ಆರೋಪಿಸಿದ್ದಾರೆ.

ಶಿಕ್ಷಣದ ಹೆಸರಿನಲ್ಲಿ ವಿದ್ಯಾರ್ಥಿಗಳಿಗೆ ಬೈಬಲ್ ಓದಲು ಒತ್ತಾಯ ಹೇರಲಾಗುತ್ತಿದೆ ಎಂದು ಆರೋಪಿಸಲಾಗಿದೆ. ಆದರೆ ಶಾಲಾ ಆಡಳಿತ ಮಂಡಳಿ ತನ್ನ ನಿಲುವಿಗೆ ಅಂಟಿಕೊಂಡಿದ್ದು, ನಾವು ಬೈಬಲ್ ಆಧಾರಿತ ಶಿಕ್ಷಣವನ್ನೇ ನೀಡುತ್ತೇವೆ ಎಂದು ಸಮರ್ಥಿಸಿಕೊಂಡಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ