ಇಲ್ಲಿನ ಸೃಷ್ಟಿ ದೃಷ್ಟಿ ಸೀರೆ ಮಾರಾಟ ಮಳಿಗೆ ತನ್ನ ಗ್ರಾಹಕರಿಗೆ ರಂಜಾನ್ ಹಬ್ಬದ ಪ್ರಯುಕ್ತ ಕೇವಲ 10 ಪೈಸೆ, 20 ಪೈಸೆ ಹಾಗೂ 50 ಪೈಸೆಗಳಿಗೆ ಸೀರೆ ಮಾರಾಟ ಮಾಡುತ್ತಿದೆ. ಇದೇ ಮಳಿಗೆ ಈ ಹಿಂದೆ ಕೇವಲ 20 ರೂ ಗೆ ಸೀರೆ ಮಾರಾಟ ಮಾಡಿ ಸುದ್ದಿಮಾಡಿತ್ತು.
ಈ ವಿಶೇಷವಾದ ಆಫರ್ ಇಂದಿನಿಂದ ಜೂನ್ 25ರ ವರೆಗೆ ಬೆಳಿಗ್ಗೆ 10ಗಂಟೆಯಿಂದ 12:30ರವೆಗೆ ಇರಲಿದೆ. ಸೀರೆ ಆಯ್ಕೆಗೂ ಸಮಯ ನಿಗದಿ ಪಡಿಸಲಾಗಿದೆಯಂತೆ. ಆದರೆ ಗ್ರಾಹಕರು ಸೀರೆ ಖರೀದಿಗೆ ಹೋಗುವಾವ 10, 20 ಹಾಗೂ 50 ಪೈಸೆಯ ನಾಣ್ಯಗಳನ್ನು ತೆಗೆದುಕೊಂಡು ಹೋಗಬೇಕು. ಈ ನಾಣ್ಯ ನೀಡಿದರೆ ಮಾತ್ರ ನಿಮಗೆ ಸೀರೆ ಲಭ್ಯ.