ಯಾದಗಿರಿಯಲ್ಲಿ ಮಹಿಳೆಯನ್ನು ನಗ್ನಗೊಳಿಸಿ ಹಲ್ಲೆ ಪ್ರಕರಣಕ್ಕೆ ಬಿಗ್ ಟ್ವಿಸ್ಟ್!
ಮಂಗಳವಾರ, 14 ಸೆಪ್ಟಂಬರ್ 2021 (11:28 IST)
ಯಾದಗಿರಿ : ಯಾದಗಿರಿ ಜಿಲ್ಲೆಯಲ್ಲಿ ಮಹಿಳೆಯನ್ನು ನಗ್ನ ಮಾಡಿ ಹಲ್ಲೆ ನಡೆಸಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಸ್ಪೋಟಕ ಮಾಹಿತಿ ಬಹಿರಂಗವಾಗಿದ್ದು, ಆರೋಪಿಗಳು ಮಹಿಳೆಯನ್ನು ನಗ್ನಗೊಳಿಸಿ ಸಾಮೂಹಿಕ ಅತ್ಯಾಚಾರ ನಡೆಸಿದ್ದಾರೆ ಎಂದು ತಿಳಿದುಬಂದಿದೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ಮಹಿಳೆ ದೂರು ನೀಡಿದ್ದಾರೆ. ಆರೋಪಿಗಳು ತನ್ನನ್ನು ಅಪಹರಿಸಿ ಸಾಮೂಹಿಕ ಅತ್ಯಾಚಾರವೆಸಗಿದ ಮಾಡಿರುವುದಾಗಿ ಮಹಿಳೆ ತಿಳಿಸಿದ್ದು, ಪ್ರಕರಣ ದಾಖಲಿಸಿಕೊಂಡ ಶಹಾಪುರ ಪೊಲೀಸರು ಆರೋಪಿಗಳಾದ ಆಟೋ ಚಾಲಕ ನಿಂಗರಾಜ, ಪೆಟ್ರೋಲ್ ಪಂಪ್ ನೌಕರ ಅಯ್ಯಪ್ಪ, ಬೀಡಾ ಅಂಗಡಿಯ ಭೀಮಾಶಂಕರ ಮತ್ತು ಮಹದೇವಪ್ಪ ಎಂಬುವವರನ್ನು ಬಂಧಿಸಿದ್ದಾರೆ.
ಯಾದಗಿರಿ ಎಸ್ ಪಿ ವೇದಮೂರ್ತಿ ಈ ಕುರಿತು ಮಾಹಿತಿ ನೀಡಿದ್ದು, ಯಾದಗಿರಿ-ಶಹಾಪುರ ಹೆದ್ದಾರಿಯಲ್ಲಿ ಮಹಿಳೆಯನ್ನು ನಗ್ನ ಮಾಡಿ ಹಲ್ಲೆ ನಡೆಸಿರುವ ಅರೋಪ ಕೇಳಿಬಂದಿತ್ತು. ಬಳಿಕ ಘಟನೆಯ ಸಂಬಂಧ ಪೊಲೀಸರು ಆರೋಪಿಗಳನ್ನು ಬಂಧಿಸಿದ್ದು, ಈ ವೇಳೆ ನಾಲ್ವರು ಆರೋಪಿಗಳು ಮಹಿಳೆಯ ಮೇಲೆ ಸಾಮೂಹಿಕ ಅತ್ಯಾಚಾರ ನಡೆಸಿದ್ದಾರೆ ಎಂದು ತಪ್ಪೊಪ್ಪಿಕೊಂಡಿದ್ದಾರೆ ಎಂದು ಹೇಳಿದ್ದಾರೆ.