ಶ್ರದ್ಧಾ ಮರ್ಡರ್ ಕೇಸ್ ಗೆ ಬಿಗ್ ಟ್ವಿಸ್ಟ್..!
ದೇಶಾದ್ಯಂತ ಸೆನ್ಸೇಷನ್ ಸೃಷ್ಠಿಸಿರುವ ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ನಡೆದ ಶ್ರದ್ಧಾ ಭೀಕರ ಮರ್ಡರ್ ಕೇಸ್ಗೆ ಬಿಗ್ ಟ್ವಿಸ್ಟ್ ಸಿಕ್ಕಿದೆ. 6 ತಿಂಗಳ ಹಿಂದೆ ದೆಹಲಿಯಲ್ಲಿ ನಡೆದಿದ್ದ ಭೀಕರ ಕೊಲೆ ಪ್ರಕರಣ ಇದೀಗ ಬಯಲಿಗೆ ಬಂದಿದ್ದು, ಆ ಕೊಲೆಯನ್ನು ಮಾಡಿರುವ ರೀತಿ ಎಂಥವರನ್ನೂ ಬೆಚ್ಚಿ ಬೀಳಿಸುವಂತಿದೆ. ಅಫ್ತಾಬ್ ಜೊತೆ ಲಿವಿಂಗ್ ಟುಗೆದರ್ ರಿಲೇಷನ್ಷಿಪ್ನಲ್ಲಿದ್ದ ಶ್ರದ್ಧಾಳನ್ನು 35 ಪೀಸ್ ಮಾಡಿ ದೇಹದ ತುಂಡುಗಳನ್ನು ದೆಹಲಿಯ ಮೆಹ್ರೌಲಿ ಅರಣ್ಯ ಪ್ರದೇಶದಲ್ಲಿ ಎಸೆದಿದ್ದ. ಇದೀಗ ಈ ಕೇಸ್ಗೆ ಬಿಗ್ ಟ್ವಿಸ್ಟ್ ಸಿಕ್ಕಿದ್ದು ಮೃತ ಶ್ರದ್ಧಾಳ ಸ್ನೇಹಿತನ ಹೇಳಿಕೆ ಪ್ರಕರಣದ ಗತಿಯನ್ನೇ ಬದಲಿಸಿದೆ. ಅಫ್ತಾಬ್ನ ಪ್ರೀತಿಯ ನಾಟಕ ಶ್ರದ್ಧಾಗೆ ತಿಳಿದಿತ್ತು. ಆದರೆ ಅವಳು ಅಷ್ಟರಲ್ಲಾಗಲೇ ಸಾವಿನ ಕದ ತಟ್ಟಿದ್ದಳು ಎಂದು ಹೇಳಿರುವ ಸ್ನೇಹಿತ, ತನ್ನ ಬಳಿ ಅವಳು ತನ್ನ ಅಳಲನ್ನು ತೋಡಿಕೊಂಡಿದ್ದಳು ಎಂದು ಹೇಳಿದ್ದಾನೆ. ಶ್ರದ್ಧಾ ನನಗೆ ವಾಟ್ಸಾಪ್ ಸಂದೇಶವನ್ನು ಕಳುಹಿಸಿದ್ಲು. ನನ್ನನ್ನು ಈ ನರಕದ ಕೂಪದಿಂದ ಕರೆದುಕೊಂಡು ಹೋಗು. ಇಲ್ಲದಿದ್ರೆ ಅಫ್ತಾಬ್ ನನ್ನನ್ನು ಕೊಲ್ಲುತ್ತಾನೆಂದಿದ್ಲು. ಈ ವೇಳೆ ನಾನು ಅಫ್ತಾಬ್ಗೆ ಎಚ್ಚರಿಕೆ ನೀಡ್ದೆ. ಇದೇ ರೀತಿಯಲ್ಲಿ ಮುಂದುವರೆದ್ರೆ ನಾನು ಪೊಲೀಸ್ ಕಂಪ್ಲೇಟ್ ಕೊಡುವ ವಾರ್ನಿಂಗ್ ಕೊಟ್ಟೆ. ಆದ್ರೆ ಶ್ರದ್ಧಾ ಹಾಗೂ ಅಫ್ತಾಬ್ ಪರಸ್ಪರ ಅನ್ಯ ಧರ್ಮದವರಾಗಿದ್ದ ಕಾರಣ, ನಾನು ಕೇಸ್ ಕೊಡಲು ಹಿಂದೇಟು ಹಾಕಿದೆ. ಕೇಸ್ ಕೊಟ್ಟರೆ ಇವರ ಪ್ರೀತಿಗೆ ತೊಂದರೆಯಾಗ್ಬೋದು ಎಂದು ಈ ನಿರ್ಧಾರ ತೆಗೆದುಕೊಂಡೆ. ಶ್ರದ್ಧಾ ದಿನಕಳೆದಂತೆ ಅಫ್ತಾಬ್ನನ್ನು ತೊರೆಯಲು ನಿರ್ಧರಿಸಿದ್ಲು. ಜೂನ್ ತಿಂಗಳಲ್ಲಿ ಶ್ರದ್ಧಾ ಜೊತೆ ಕೊನೆಯದಾಗಿ ಮಾತನಾಡಿದ್ದೆ ಎಂದು ಪೊಲೀಸರ ಬಳಿ ಹೇಳಿದ್ದಾನೆ.