ಮಂಗಳೂರಿನಲ್ಲಿ ನಿಷೇಧದ ನಡುವೆಯೂ ಬಿಜೆಪಿ ಬೈಕ್ ರ್ಯಾಲಿ...!
ಗುರುವಾರ, 7 ಸೆಪ್ಟಂಬರ್ 2017 (10:17 IST)
ಸರಕಾರ ನಿಷೇಧ ಹೇರಿರುವ ಮಧ್ಯೆಯೂ ಬಿಜೆಪಿ ಬೈಕ್ ರ್ಯಾಲಿ ಆಯೋಜಿಸಲು ಮುಂದಾಗಿರುವುದು ಪೊಲೀಸರಿಗೆ ತಲೆ ನೋವು ತಂದಿದೆ.
ದಕ್ಷಿಣ ಕನ್ನಡ ಜಿಲ್ಲೆ ಮಂಗಳೂರು ನಗರದ ಜ್ಯೋತಿ ಸರ್ಕಲ್ ಬಳಿ ಜಮಾವಣೆಗೊಂಡ ನೂರಾರು ಬಿಜೆಪಿ ಕಾರ್ಯಕರ್ತರು, ನ್ಯಾಯ ಬೇಕು, ಕಾಂಗ್ರೆಸ್ ತೊಲಗಲಿ ಎನ್ನುವ ಘೋಷಣೆಗಳನ್ನು ಸರಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಬಿಜೆಪಿ ಯುವ ಮೊರ್ಚಾದಿಂದ ಮಂಗಳೂರು ಚಲೋ ಕಾರ್ಯಕ್ರಮ ಹಮ್ಮಿಕೊಂಡಿದ್ದು, ಬಿಜೆಪಿ ಕಾರ್ಯಕರ್ತರು ಕಾಂಗ್ರೆಸ್ ಸರಕಾರದ ವಿರುದ್ಧ ಘೋಷಣೆಗಳನ್ನು ಕೂಗಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಮಂಗಳೂರು ಚಲೋ ಮತ್ತು ಬೈಕ್ ರ್ಯಾಲಿಗೆ ಸರಕಾರದ ಅನುಮತಿ ಕೇಳಿರಲಿಲ್ಲ ಎಂದು ಬಿಜೆಪಿ ಯುವ ಮೋಚ್ರಾ ಪದಾಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ.
ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ, ಆರ್.ಅಶೋಕ್ ಸೇರಿದಂತೆ ಇತರ ಬಿಜೆಪಿ ನಾಯಕರು ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುತ್ತಿದ್ದಾರೆ ಎಂದು ಪಕ್ಷದ ವಕ್ತಾರರು ತಿಳಿಸಿದ್ದಾರೆ.
ಬಿಜೆಪಿ ಪ್ರತಿಭಟನೆಯ ಹಿನ್ನೆಲೆಯಲ್ಲಿ ಭಾರಿ ಪೊಲೀಸ್ ಬಿಗಿ ಬಂದೋಬಸ್ತ್ ಏರ್ಪಡಿಸಲಾಗಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ.