ಬಿಬಿಎಂಪಿ ಆಸ್ತಿಯನ್ನು ಅಡವಿಟ್ಟಿರುವುದೇ ಬಿಜೆಪಿ ಸಾಧನೆ: ಸಿಎಂ

ಶನಿವಾರ, 8 ಅಕ್ಟೋಬರ್ 2016 (16:42 IST)
ಬೆಂಗಳೂರು: ಕಸದ ಸಮಸ್ಯೆ ಹಾಗೂ ಸ್ವತ್ತುಗಳನ್ನು ಅಡವಿಟ್ಟಿರುವುದು ಬಿಜೆಪಿ ಗಿಫ್ಟ್. ಹುಚ್ಚಿ ಮದುವೆಯಲ್ಲಿ ಉಂಡೋನೆ ಜಾಣ ಎನ್ನುವಂತೆ ಸಿಕ್ಕಿರುವುದೇ ಸೀರುಂಡೆ ಎನ್ನುವಂತೆ ಬಿಜೆಪಿಯವರು ವರ್ತಿಸಿದ್ದಾರೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದರು.
ನಮ್ಮ ಅವಧಿಯಲ್ಲಿ ಬಿಬಿಎಂಪಿ ವಿಭಜನೆ ಖಚಿತ......
 
ಬಿಬಿಎಂಪಿ ವಿಭಜನೆಗೆ ವಿರೋಧ ವ್ಯಕ್ತವಾದ ಹಿನ್ನೆಲೆಯಲ್ಲಿ ತಾತ್ಕಾಲಿಕ ತಡೆ ನೀಡಲಾಗಿತ್ತು. ರಾಜ್ಯಧಾನಿಯ ಜನಸಂಖ್ಯೆ 1 ಕೋಟಿ ದಾಟಿದೆ. 55 ಲಕ್ಷ ವಾಹನಗಳಿರುವುದರಿಂದ ಟ್ರಾಫಿಕ್ ಸಮಸ್ಯೆ ಉಂಟಾಗುತ್ತಿದೆ. ಕೇವಲ ಒಬ್ಬ ಮೇಯರ್‌ಯಿಂದ ಸಂಪೂರ್ಣ ಬೆಂಗಳೂರನ್ನು ನೋಡಿಕೊಳ್ಳಲು ಸಾಧ್ಯವಿಲ್ಲ. ಹೀಗಾಗಿ ನಮ್ಮ ಅವಧಿಯಲ್ಲೇ ಬೆಂಗಳೂರು ಮಹಾನಗರ ಪಾಲಿಕೆಯನ್ನು ಮೂರು ನಾಲ್ಕು ಭಾಗಗಳಾಗಿ ವಿಂಗಡಿಸುತ್ತೇವೆ ಎಂದು ಹೇಳಿದರು.
 
ಕಾವೇರಿ ವಿವಾದ...........
 
ಕಾವೇರಿ ಜಲಾಶಯಕ್ಕೆ ಹೆಚ್ಚುವರಿ ನೀರು ಹರಿದು ಬಂದರೇ ಮಾತ್ರ ತಮಿಳುನಾಡಿಗೆ ನೀರು ಬಿಡುತ್ತೇವೆ. ಇಲ್ಲದಿದ್ದರೆ, ಕಾನೂನು ಉಲ್ಲಂಘನೆಯಾದರು ಪರವಾಗಿಲ್ಲ ತಮಿಳುನಾಡಿಗೆ ನೀರು ಬಿಡುವುದಿಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಸ್ಪಷ್ಟಪಡಿಸಿದ್ದಾರೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ