BJPಯವರು ಅಪಪ್ರಚಾರ ಮಾಡ್ತಿದ್ದಾರೆ- ಸಿಎಂ ಸಿದ್ದರಾಮಯ್ಯ
ವಿರೋಧ ಪಕ್ಷದವರು ನಮ್ಮ ಮೇಲೆ ಅಪಪ್ರಚಾರ ಮಾಡ್ತಿದಾರೆ ಅಂತಾ BJP ವಿರುದ್ದ ಸಿಎಂ ಸಿದ್ದರಾಮಯ್ಯ ಕಿಡಿಕಾರಿದ್ರು.. ಬೆಂಗಳೂರಿನಲ್ಲಿ ಮಾತನಾಡಿದ ಅವರು, ವರ್ಷದಲ್ಲಿ ಬಳಸಿದ ವಿದ್ಯುತ್ನ ಸರಾಸರಿ ಮೇಲೆ ನಾವು ಚಾರ್ಜ್ ಹಾಕ್ತೇವೆ ಎಂದು ಹೇಳಿದ್ದೀವಿ. ಆದರೆ ನಮಗೆ 200 ಯೂನಿಟ್ ಹೇಳಿದ್ದೀರಿ ಅಷ್ಟೇ ಕೊಡಿ ಅಂತಿದ್ದಾರೆ.. ಎಷ್ಟು ವಿದ್ಯುತ್ ಬಳಸ್ತಿದ್ದಾರೋ ಅಷ್ಟೇ ವಿದ್ಯುತ್ ಬಳಸಬೇಕು.. ಹೆಚ್ಚು ಬಳಸಿದರೆ ದುಂದು ವೆಚ್ಚ ಆಗುತ್ತೆ. ಮನುಷ್ಯನಿಗೆ ವಿವೇಕ ಇರಬೇಕು. ನಾವೂ ಬದುಕಬೇಕು, ಸಮಾಜದಲ್ಲಿರುವವರು ಬದುಕಬೇಕು. ಹಾಗಾಗಿ ಕೆಲವು ಮಿತಿಗಳನ್ನು ಹಾಕಬೇಕಾಗುತ್ತದೆ ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ರು.