ಸಿದ್ದರಾಮಯ್ಯ ಬಿಜೆಪಿ ಸೇರ್ಪಡೆ?: ಕಾಂಗ್ರೆಸ್ ಶಾಸಕ ಹೀಗ್ಯಾಕೆ ಹೇಳಿದರು?

ಮಂಗಳವಾರ, 25 ಜೂನ್ 2019 (17:01 IST)
ಮೈತ್ರಿ ಸರಕಾರದ ಸಮನ್ವಯ ಸಮಿತಿ ಅಧ್ಯಕ್ಷ ಹಾಗೂ ಮಾಜಿ ಸಿಎಂ ಸಿದ್ದರಾಮಯ್ಯ ಬಿಜೆಪಿಗೆ ಸೇರ್ಪಡೆ ಕುರಿತು ಚರ್ಚೆ ಶುರುವಾಗಿದೆ. ಈದರ ನಡುವೆಯೇ ಸಿದ್ದರಾಮಯ್ಯ ಬಿಜೆಪಿ ಸೇರ್ಪಡೆಯಾದರೆ ನಾನು ರಾಜಕೀಯ ಸನ್ಯಾಸ ಸ್ವೀಕಾರ ಮಾಡುವೆ ಎಂದು ಶಾಸಕರೊಬ್ಬರು ಹೇಳಿದ್ದಾರೆ.

ಕೊಪ್ಪಳ ಜಿಲ್ಲೆಯ ಹಿಟ್ನಾಳ್ ಮಾಗ೯ವಾಗಿರುವ ಟೊಲ್ ಗೇಟ್ ಬಳಿ ಹೋರಾಟ ನಡೆಯಿತು. ಏಕಾಏಕಿ ಸ್ಥಳೀಯ 400 ಕಾರ್ಮಿಕರನ್ನ ಟೋಲ್ ಸಿಬ್ಬಂದಿ ಕೆಲಸದಿಂದ ತೆಗೆದು ಹಾಕಿರುವ ಕಾರಣಕ್ಕೆ ಹೋರಾಟ ನಡೆಯಿತು. ಹೋರಾಟದಲ್ಲಿ ಕುಷ್ಟಗಿ ಶಾಸಕ ಅಮರೇಗೌಡ ಬಯ್ಯಾಪುರ, ಮಾಜಿ ಶಾಸಕ ದೊಡ್ಡನಗೌಡ ಪಾಟೀಲ, ಕೊಪ್ಪಳ ಶಾಸಕ ರಾಘವೇಂದ್ರ ಹಿಟ್ನಾಳ ಭಾಗಿಯಾಗಿದ್ದರು.

ಈ ವೇಳೆ ಟೊಲ್ ಗೇಟ್ ಸ್ಥಳೀಯ ಸಿಬ್ಬಂದಿಗಳನ್ನ ತಕ್ಷಣವೇ ನೇಮಕ ಮಾಡಿಕೊಳ್ಳಬೇಕು ಎಂದು ಶಾಸಕ ರಾಘವೇಂದ್ರ ಒತ್ತಾಯಿಸಿದರು.

ಇನ್ನು ಇದೇ ವೇಳೆ, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಬಿಜೆಪಿ ಸೇರುವ ಸುದ್ದಿ ಹರಿದಾಡುತ್ತಿದೆ. ಈ ಬಗ್ಗೆ ಮಾಧ್ಯಮದವರು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯೆ ನೀಡಿದ ಕುಷ್ಟಗಿ ಶಾಸಕ ಅಮರೇಗೌಡ ಬಯ್ಯಾಪುರ, ಸಿದ್ದರಾಮಯ್ಯ ಅವರು ಬಿಜೆಪಿ ಸೇರಿದರೆ ನಾನೂ ರಾಜಕೀಯ ಸನ್ಯಾಸಿಯಾಗುತ್ತೇನೆ. ಹೀಗಂತ ಕುಷ್ಟಗಿ ಶಾಸಕ ಅಮರೇಗೌಡ ಬಯ್ಯಾಪುರ ಹೇಳಿಕೆ ನೀಡಿದ್ದಾರೆ.


ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ