ಸಿಎಂ ಬಿಎಸ್ ವೈ ಭೇಟಿಗೆ ಬಂದಾಗಲೂ ಮುನಿಸು ಮುಂದುವರಿಸಿದ ಬಿಜೆಪಿ ನಾಯಕರು

ಶುಕ್ರವಾರ, 28 ಫೆಬ್ರವರಿ 2020 (10:19 IST)
ಬೆಂಗಳೂರು : ಸಿಎಂ ಬಿಎಸ್ ವೈ ಭೇಟಿಗೆ ಬಂದಾಗಲೂ ಸಂಸದ ಬಿಎನ್ ಬಚ್ಚೇಗೌಡ ಹಾಗೂ ಎಂಟಿಬಿ ನಾಗರಾಜ್ ಅವರು ಒಬ್ಬರ ಮುಖ ಮತ್ತೊಬ್ಬರು ನೋಡದೆ ಮುನಿಸು ಮುಂದುವರಿಸಿದ್ದಾರೆ ಎನ್ನಲಾಗಿದೆ.


ಇಂದು ಡಾಲರ್ಸ್ ಕಾಲೋನಿಯಲ್ಲಿರುವ ಸಿಎಂ ನಿವಾಸಕ್ಕೆ ಭೇಟಿ ನೀಡಿದ  ಸಂಸದ ಬಚ್ಚೇಗೌಡ ಹಾಗೂ ಎಂಟಿಬಿ ನಾಗರಾಜ್ ಸಿಎಂ ಅವರನ್ನು ಭೇಟಿ ಮಾಡಿ ಮಾತುಕತೆ ನಡೆಸಿದ್ದಾರೆ. ಮೊದಲು ಸಿಎಂ ನಿವಾಸಕ್ಕೆ ಭೇಟಿ ನೀಡಿದ್ದ  ಸಂಸದ ಬಚ್ಚೇಗಡರು ಎಂಟಿಬಿ ನಾಗರಾಜ್  ಸಿಎಂ ಭೇಟಿಯಾಗಲು  ಬರ್ತಿದ್ದ ವಿಚಾರ ತಿಳಿದು ಸಿಎಂ ನಿವಾಸದಿಂದ ಹೊರಬಂದಿದ್ದಾರೆ.


ಸಿಎಂ ನಿವಾಸದ ಮುಂದೆ ನಾಯಕರಿಬ್ಬರು ಮುಖಾಮುಖಿಯಾದ್ರೂ ಮಾತಿಲ್ಲ ಕಥೆಯಿಲ್ಲದೆ ಒಬ್ಬರ ಮುಖ ಮತ್ತೊಬ್ಬರು ನೋಡದೆ ತಮ್ಮ ಮುನಿಸನ್ನು ಮುಂದುವರಿಸಿದ್ದಾರೆ ಎನ್ನಲಾಗಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ