ವಾಟ್ಸಪ್ ನಲ್ಲಿ ಹುಡುಗಿಯರ ಬೆತ್ತಲೆ ಫೋಟೋ ಕಳುಹಿಸಿದ ಶಾಸಕ!

ಗುರುವಾರ, 4 ಮೇ 2017 (07:00 IST)
ಬೆಂಗಳೂರು: ಹಿಂದೊಮ್ಮೆ ಸದನದಲ್ಲಿ ಅಶ್ಲೀಲ ಚಿತ್ರ ವೀಕ್ಷಿಸಿ ಸಿಕ್ಕಿಬಿದ್ದ ಪ್ರಕರಣದಂತೆಯೇ ಇದೀಗ ಮತ್ತೊಬ್ಬ ಶಾಸಕ ವಾಟ್ಸಪ್ ಗ್ರೂಪ್ ನಲ್ಲಿ ಅಶ್ಲೀಲ ಚಿತ್ರ ರವಾನಿಸಿ ಬಿಜೆಪಿ ಪಕ್ಷಕ್ಕೆ ಮುಜುಗರ ತಂದಿತ್ತಿದ್ದಾರೆ.

 
ಮಹಂತೇಶ್ ಕವಟಗಿಮತ್ ಎಂಬ ಬೆಳಗಾವಿ ಬಿಜೆಪಿ ಶಾಸಕ ಪ್ರಭಾವಿ ರಾಜಕಾರಣಿಗಳು ಮತ್ತು ಪೊಲೀಸ್ ಅಧಿಕಾರಿಗಳಿರುವ ವಾಟ್ಸಪ್ ಗ್ರೂಪ್ ಗೆ ಹುಡುಗಿಯರ ಸುಮಾರು 50 ಬೆತ್ತಲೆ ಫೋಟೋಗಳನ್ನು ಕಳುಹಿಸಿದ ಮಹಾನುಭಾವ.

ಸಂದೇಶ ನೋಡಿದ ಸದಸ್ಯರಿಗೆಲ್ಲಾ ಶಾಕ್ ಆಗಿತ್ತು. ತಕ್ಷಣ ಗ್ರೂಪ್ ಆಡ್ಮಿನ್ ಮಹಂತೇಶ್ ರನ್ನು ಗ್ರೂಪ್ ನಿಂದಲೇ ಕಿತ್ತು ಹಾಕಿದರು. ಕೆಲವು ಮಾಧ್ಯಮ ಪ್ರತಿನಿಧಿಗಳೂ ಇದರ ಸದಸ್ಯರಾಗಿದ್ದರಿಂದ ತಕ್ಷಣ ಸುದ್ದಿ ವೈರಲ್ ಆಯ್ತು.

ಪ್ರಕರಣಕ್ಕೆ ಸಂಬಂಧಿಸಿದಂತೆ ಶಾಸಕರನ್ನು ಸಂಪರ್ಕಿಸಲು ಪ್ರಯತ್ನಿಸಿದರೂ ಅವರು ಫೋನ್ ಸ್ವಿಚ್ ಆಫ್ ಮಾಡಿಕೊಂಡಿದ್ದಾರೆ. ಇತ್ತೀಚೆಗೆ ವಾಟ್ಸಪ್ ನಲ್ಲಿ ಅಶ್ಲೀಲ ಮೆಸೇಜ್ ಕಳುಹಿಸುವುದು ಗಂಭೀರ ಅಪರಾಧ ಎಂಬ ನಿಯಮವಿದೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ   

ವೆಬ್ದುನಿಯಾವನ್ನು ಓದಿ