ಆಡಳಿತಾರೂಢ ಬಿಜೆಪಿಗೆ ಪ್ರತಿಷ್ಠೆಯ ಕಣವಾಗಿ ಪರಿಣಮಿಸಿರುವ ಸ್ಥಳೀಯ ಸಂಸ್ಥೆಗಳ 25 ಕ್ಷೇತ್ರಗಳ ಅಭ್ಯರ್ಥಿಗಳ ಪಟ್ಟಿ ಒಂದೆರಡು ದಿನಗಳಲ್ಲಿ ಪ್ರಕಟವಾಗಲಿದೆ.ಬಿಜೆಪಿಯ ರಾಷ್ಟ್ರೀಯ ನಾಯಕರು ಬೇರೆ ಬೇರೆ ರಾಜ್ಯಗಳ ಪ್ರವಾಸದಲ್ಲಿರುವುದರಿಂದ, ರಾಜ್ಯ ನಾಯಕರು ಕಳುಹಿಸಿರುವ ಪಟ್ಟಿಯನ್ನು ಪರಿಚಯಿಸಲು ಸಮಯಾ ವಕಾಶ ಸಿಗದ ಕಾರಣ ವಿಳಂಬವಾಗಿದೆ ಎನ್ನಲಾಗುತ್ತಿದೆ.ಚಿಕ್ಕಮಗಳೂರಿನಿಂದ ಎಂ.ಕೆ.ಪ್ರಾಣೇಶ್ಗೆ ಟಿಕೆಟ್ ಬಹುತೇಕ ಖಾತರಿಯಾಗಿದೆ. ತುಮಕೂರಿನಿಂದ ಹುಲಿನಾಯ್ಕರ್ ಹೆಸರು ಕೇಳಿಬಂದಿದೆ.ಚಿತ್ರದುರ್ಗದಿಂದ ನವೀನ್, ಹಿರಿಯೂರು ಶಾಸಕಿ ಪೂರ್ಣಿಮಾ ಶ್ರೀನಿವಾಸ್ ಅವರ ಪತಿ ಶ್ರೀನಿವಾಸ್, ಕೋಲಾರ, ಚಿಕ್ಕಬಳ್ಳಾಪುರದಿಂಚ ಚಿತ್ರ ನಿರ್ಮಾಪಕ ಸಿ.ಆರ್.ಮನೋಹರ್ ಹೆಸರುಗಳು ಚಾಲ್ತಿಯಲ್ಲಿವೆ.
ಸಂಘಟನೆ ಹಿನ್ನಡೆ ಇರುವ ಹಾಸನ, ರಾಮನಗರ, ಬೆಂಗಳೂರು ಗ್ರಾಮಾಂತರ ಕಡೆಗಳಲ್ಲಿ ಬಿಜೆಪಿ ಹೆಚ್ಚು ತಲೆಕೆಡಿಸಿಕೊಳ್ಳದೆ ಗೆಲ್ಲುವ ಕ್ಷೇತ್ರಗಳಿಗೆ ಹೆಚ್ಚಿನ ಗಮನಹರಿಸಲಿದೆ.