ಬಿಜೆಪಿಯ ಹೆಬ್ಬಾಗಿಲು ಮುಚ್ಚಿಸುತ್ತೇನೆ ಎಂದ ದೇವೇಗೌಡರಿಗೆ ಬಿಜೆಪಿ ತಿರುಗೇಟು
ಕರ್ನಾಟಕದಲ್ಲಿ ನಡೆಯಲಿರುವ ಲೋಕಸಭೆ ಉಪಚುನಾವಣೆಯಲ್ಲಿ ಬಿಜೆಪಿ ಸೋಲಿಸುವ ವಿಚಾರವಾಗಿ ಮಾತನಾಡಿದ ದೇವೇಗೌಡರಿಗೆ ಕರ್ನಾಟಕ ಬಿಜೆಪಿ ಟ್ವೀಟ್ ಮೂಲಕ ತಿರುಗೇಟು ಕೊಟ್ಟಿದೆ.
‘ಮೋದಿ ಪ್ರಧಾನಿಯಾದರೆ ದೇಶ ಬಿಡುತ್ತೇನೆ ಎನ್ನುವುದರಿಂದ ತೊಡಗಿ ದಕ್ಷಿಣ ಭಾರತದಲ್ಲಿ ಬಿಜೆಪಿಯನ್ನು ತಡೆಯುತ್ತೇನೆ ಎನ್ನುವುದರವರೆಗೆ ಮಾಜಿ ಪ್ರಧಾನಿಗಳು ಸತ್ಯ ತಿಳಿದುಕೊಂಡಂತೆ ಕಾಣುತ್ತಿಲ್ಲ. ದೇವೇಗೌಡ ಅವರೇ ದಕ್ಷಿಣ ಭಾರತದಲ್ಲಿ ಬಿಜೆಪಿಯನ್ನು ತಡೆಯುವುದಿರಲಿ, ನಾವು ಈಗಾಗಲೇ ನಿಮ್ಮ ಭದ್ರಕೋಟೆ ಹಾಸನಕ್ಕೆ ಲಗ್ಗೆಯಿಟ್ಟಿದ್ದೇವೆ’ ಎಂದು ವ್ಯಂಗ್ಯ ಮಾಡಿದೆ.