ಸಿಎಂ ಕುರ್ಚಿಗೆ ಡಿಕೆ ಶಿವಕುಮಾರ್ ಗೆ ಅಡ್ಡಿಯಾಗ್ತಿರೋರು ಯಾರು ಎಂದ ಬಿಜೆಪಿ
ಸಿದ್ದರಾಮಯ್ಯ ಅವರ ರಾಜಕೀಯ ಹೊಡೆತ ತಾಳಲಾರದೇ ಅಸಹಾಯಕತೆಯ ಮಾತನ್ನು ಡಿ.ಕೆ. ಶಿವಕುಮಾರ್ ಅವರು ಹೇಳಿದ್ದಾರೆ. ಸಿದ್ದರಾಮಯ್ಯರನ್ನು ತಲೆಯಲ್ಲಿ ಹೊತ್ತು ತಿರುಗಾಡುತ್ತಿರುವ ಜಮೀರ್, ಮಹದೇವಪ್ಪ ಮುಂತಾದವರ ವಿರುದ್ಧ ಕ್ರಮ ತೆಗೆದುಕೊಳ್ಳುವ ಧೈರ್ಯವೂ ಡಿಕೆಶಿಗೆ ಬರುತ್ತಿಲ್ಲ.
ಒಟ್ಟಿನಲ್ಲಿ ಸಿಎಂ ಕುರ್ಚಿಯ ಸಲುವಾಗಿ ನಡೆಯುತ್ತಿರುವ ಕಾಂಗ್ರೆಸ್ ನಾಯಕರೊಳಗಿನ ಫೈಟ್‌ನಿಂದ ಸಚಿವರುಗಳು, ಶಾಸಕರು ಹಾದಿ ಬೀದಿಯಲ್ಲಿ ಕಿತ್ತಾಡುತ್ತಿದ್ದು ರಾಜ್ಯದ ಆಡಳಿತ ಮಾತ್ರ ಮೂರಾಬಟ್ಟೆಯಾಗಿದೆ ಎಂದು ಬಿಜೆಪಿ ವ್ಯಂಗ್ಯ ಮಾಡಿ ರಾಜ್ಯ ಕಾಂಗ್ರೆಸ್ ನಾಯಕರಿಗೆ ತಿವಿದಿದೆ.