ಬೆಂಗಳೂರು ದಕ್ಷಿಣ ಕ್ಷೇತ್ರದ ಬಿಜೆಪಿ ಟಿಕೆಟ್ ವಿಚಾರ; ಯುಟರ್ನ್ ಹೊಡೆದ ಬಿಜೆಪಿ ನಾಯಕರು

ಮಂಗಳವಾರ, 12 ಮಾರ್ಚ್ 2019 (12:59 IST)
ಬೆಂಗಳೂರು : ಬೆಂಗಳೂರು ದಕ್ಷಿಣ ಕ್ಷೇತ್ರದ ಬಿಜೆಪಿ ಟಿಕೆಟ್ ವಿಚಾರಕ್ಕೆ ಸಂಬಂಧಿಸಿದಂತೆ ಕೇಂದ್ರ ನಾಯಕರ ಒತ್ತಡಕ್ಕೆ ಮಣಿದು  ಬೆಂಗಳೂರು ಬಿಜೆಪಿ ನಾಯಕರು ಯುಟರ್ನ್ ಹೊಡೆದಿದ್ದಾರೆ ಎನ್ನಲಾಗಿದೆ.


ಬೆಂಗಳೂರು ದಕ್ಷಿಣ ಕ್ಷೇತ್ರದ ಬಿಜೆಪಿ ಟಿಕೆಟ್ ತೇಜಸ್ವಿನಿ ಅನಂತ್ ಕುಮಾರ್ ಗೆ ನೀಡುವ ಕುರಿತು ಬೆಂಗಳೂರು ಬಿಜೆಪಿ ನಾಯಕರು ವಿರೋಧ ವ್ಯಕ್ತಪಡಿಸಿದ್ದರು. ಆದರೆ ಇದಕ್ಕೆ ಕೇಂದ್ರ ನಾಯಕರು ಒಪ್ಪದೆ ತೇಜಸ್ವಿನಿ ಅನಂತ್ ಕುಮಾರ್ ಹೆಸರು ಶಿಫಾರಸಿಗೆ ಸೂಚನೆ ನೀಡಿದ್ದಾರೆ. ಕೇಂದ್ರದ ಬಿಜೆಪಿ ನಾಯಕರಿಂದಲೇ ಸೂಚನೆ ಬಂದ ಹಿನ್ನಲೆಯಲ್ಲಿ ಅನಿವಾರ್ಯವಾಗಿ ಆರ್.ಅಶೋಕ್ ತೇಜಸ್ವಿನಿ ಪರ ನಿಂತಿದ್ದಾರೆ ಎನ್ನಲಾಗಿದೆ.


ತೇಜಸ್ವಿನಿಗೆ ಟಿಕೆಟ್ ಸಿಗುವ ಸೂಚನೆ ಸಿಗುತ್ತಿದ್ದಂತೆ ಎಲ್ಲರ ಸಮ್ಮುಖದಲ್ಲಿ ಹೆಸರು ಶಿಫಾರಸು ಮಾಡೋ ಘೋಷಣೆ ಮಾಡಿ ಬೆಂಗಳೂರು ದಕ್ಷಿಣದಲ್ಲಿ ಗೆಲುವಿಗೆ ಸಾಮೂಹಿಕವಾಗಿ ಪ್ರಯತ್ನಿಸೋದಾಗಿ ಆರ್.ಅಶೋಕ್ ಹೇಳಿದ್ದಾರೆ. ಹಾಗೇ ವಿ.ಸೋಮಣ್ಣ ಕೂಡ  ತೇಜಸ್ವಿನಿ ಅನಂತ್ ಕುಮಾರ್ ಗೆ ಬೆಂಬಲ ಸೂಚಿಸಿದ್ದಾರೆ. ಈ ಎಲ್ಲಾ ವಿಚಾರಗಳನ್ನು ಗಮನಿಸಿದರೆ ಈ ನಾಯಕರು ಮೊದಲು ವಿರೋಧಿಸಿ ನಂತರ ಮುಖಭಂಗ ಅನುಭವಿಸಿದ್ರಾ..? ಎಂಬ ಪ್ರಶ್ನೆ ಎಲ್ಲರಲೂ ಮೂಡಿದೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ.

 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ