ಈ ಬಗ್ಗೆ ಮಾಹಿತಿ ನೀಡಿದ ಬಿಎಂಟಿಸಿ ಅಧಿಕಾರಿಗಳು, ಬಿಎಂಟಿಸಿ ತನಿಖಾ ತಂಡ ನವೆಂಬರ್‌ನಲ್ಲಿ 20,432 ಟ್ರಿಪ್‌ಗಳನ್ನು ಒಟ್ಟು ತಪಾಸಣೆ ಮಾಡಿ 2580 ಟಿಕೆಟ್ ರಹಿತ ಪ್ರಯಾಣಿಕರನ್ನು ಪತ್ತೆ ಮಾಡಿದೆ.
ಇಡೀ ತಿಂಗಳಿನಲ್ಲಿ ನಿಯಮ ಉಲ್ಲಂಘಿಸಿದ 2,794 ಪ್ರಯಾಣಿಕರಿಂದ ಬರೋಬ್ಬರಿ 4,26,734 ರೂ. ದಂಡ ಪಡೆಯಲಾಗಿದೆ. ಮಹಿಳಾ ಪ್ರಯಾಣಿಕರಿಗೆ ಮೀಸಲಿಟ್ಟಿದ್ದ ಆಸನಗಳಲ್ಲಿ ಕುಳಿತಿದ್ದ 214 ಪುರುಷ ಪ್ರಯಾಣಿಕರಿಂದ ಒಟ್ಟು 21,400 ರೂ. ಸಂಗ್ರಹಿಸಿದೆ.