ಮಾಜಿ ಸಿಎಂ ಬಸವರಾಜ್ ಬೊಮ್ಮಾಯಿ ನಿವಾಸಕ್ಕೆ ನೂತನ ರಾಜ್ಯಾಧ್ಯಕ್ಷ ಬಿ ವೈ ವಿಜಯೇಂದ್ರ ಆಗಮಿಸಿದ್ರು.ಆರ್ ಟಿ ನಗರದಲ್ಲಿರಿವ ಮಾಜಿ ಸಿಎಂ ಬೊಮ್ಮಾಯಿ ನಿವಾಸಕ್ಕೆ ಆಗಮಿಸಿ ಮಾಜಿ ಸಿಎಂ ಬೊಮ್ಮಾಯಿ ಆಶೀರ್ವಾದ ವಿಜಯೇಂದ್ರ ಪಡೆದಿದ್ದಾರೆ.
ಬೊಮ್ಮಾಯಿ ಭೇಟಿ ನಂತರ ಬಿಜೆಪಿ ರಾಜ್ಯಾಧ್ಯಕ್ಷ ಬಿ ವೈ ವಿಜಯೇಂದ್ರ ಪ್ರತಿಕ್ರಿಯಿಸಿದ್ದಾರೆ.ಹಿರಿಯರಾದ ಬಸವರಾಜ್ ಬೊಮ್ಮಾಯಿ ಅವರನ್ನ ಭೇಟಿ ಮಾಡಿ.ಅವರ ಆಶೀರ್ವಾದ ಮತ್ತು ಮಾರ್ಗದರ್ಶನ ವನ್ನು ಸದಾ ಇರಬೇಕೆಂದು ಪ್ರಾರ್ಥನೆ ಅವರಲ್ಲಿ ಮಾಡಿದ್ದೇನೆ.ಅವ್ರು ಬಹಳ ಸಂತೋಷ ಪಟ್ಟರು, ವರಿಷ್ಠರು ಒಳ್ಳೆಯ ನಿರ್ಧಾರ ಮಾಡಿದ್ದಾರೆ.ನಿನ್ನ ನೇಮಕದಿಂದ ಪಕ್ಷಕ್ಕೆ ದೊಡ್ಡ ಶಕ್ತಿ ಬಂದಿದೆ.ನಾನಷ್ಟೇ ಅಲ್ಲ, ಎಲ್ಲ ಹಿರಿಯರು ನಿನ್ನ ಜೊತೆ ಇರ್ತೇವೆ ಎಂದಿದ್ದಾರೆ.