ಮಳೆಗಾಗಿ ಪ್ರಾರ್ಥಿಸಿ ಬಾಲಕನ ಬೆತ್ತಲೆ ಮೆರವಣಿಗೆ (ವಿಡಿಯೋ)

ಶುಕ್ರವಾರ, 17 ಜೂನ್ 2016 (12:51 IST)
ಆಧುನಿಕತೆ ಈ ಪರಿಯಲ್ಲಿ ಬೆಳೆದಿದ್ದರೂ ಜನರು ಮೂಡನಂಬಿಕೆಗಳಿಗೆ ಇನ್ನು ಕೂಡ ದಾಸರಾಗಿರುವುದು ಎಲ್ಲರಿಗೂ ಗೊತ್ತಿರುವ ಸಂಗತಿಯೇ. ಚಿತ್ರದುರ್ಗದಲ್ಲಿ ನಡೆಸಿದ ಈ ಅಂಧಾಚರಣೆ ನಾಗರಿಕ ಸಮಾಜ ತಲೆ ತಗ್ಗಿಸುವಂತೆ ಮಾಡಿದೆ.

ಮಳೆಗಾಗಿ ಪ್ರಾರ್ಥಿಸಿ ಬಾಲಕನೊಬ್ಬನನ್ನು ಬೆತ್ತಲೆ ಮಾಡಿ ಊರ ತುಂಬ ಮೆರವಣಿಗೆ ಮಾಡಿದ ಘಟನೆ ಚಿತ್ರದುರ್ಗದ ಪಂಡರಹಳ್ಳಿಯಲ್ಲಿ ನಡೆದಿದೆ. ಈ ಆಚರಣೆಯ ದೃಶ್ಯಾವಳಿಗಳು ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿ ಹರಿದಾಡುತ್ತಿದ್ದು ಕೃತ್ಯಕ್ಕೆ ದೇಶವ್ಯಾಪಿ ವ್ಯಾಪಕ ಖಂಡನೆ ವ್ಯಕ್ತವಾಗುತ್ತಿದೆ. 
 
ಬರಪೀಡಿತ ಗ್ರಾಮದಲ್ಲಿ ಮಳೆಗಾಗಿ ಪ್ರಾರ್ಥನೆ ಸಲ್ಲಿಸಿದ ಜನರು ದೇವರನ್ನು ಮೆಚ್ಚಿಸಲು ಪುಟ್ಟ ಬಾಲಕನನ್ನು ನಗ್ನವಾಗಿ ಮೆರವಣಿಗೆ ಮಾಡಿಸಿದ್ದಾರೆ. ಕಳೆದ ಜೂನ್ 10 ರಂದು ಈ ಘಟನೆ ನಡೆದಿತ್ತು. 
 
ವಿಡಿಯೋದಲ್ಲೇನಿದೆ?: ಬಾಲಕನ ಮೇಲೆ ಮೇಲೆ ನೀರು ಸುರಿವ ಗ್ರಾಮಸ್ಥರು ಆತನಿಗೆ ಹೂಮಾಲೆ ತೊಡಿಸಿ, ವಿಗ್ರಹವೊಂದನ್ನು ತಲೆಯ ಮೇಲಿಟ್ಟು ಬಾಲಕನ ಬೆತ್ತಲೆ ಮೆರವಣಿಗೆ ಮಾಡಿಸಿದ್ದಾರೆ. ಬಳಿಕ ಆತನಿಗೆ ಹೊಸ ಬಟ್ಟೆ ನೀಡಲಾಗಿದೆ.
 
ಇದು ಮಳೆಗಾಗಿ ನಡೆದ ವಿಶೇಷ ಪ್ರಾರ್ಥನೆ ಎನ್ನುತ್ತಾರೆ ಪಂಡರಹಳ್ಳಿ ಗ್ರಾಮಸ್ಥರು. ಈ ಆಚರಣೆಯಿಂದ ಗ್ರಾಮದಲ್ಲಿ ಮಳೆಯಾಗುತ್ತದೆ ಎಂಬುದು ಅವರ ನಂಬಿಕೆ. 
 
ಮಳೆಗಾಗಿ ಪ್ರಾರ್ಥಿಸಿ ಬಾಲಕನ ಬೆತ್ತಲೆ ಮೆರವಣಿಗೆ (ವಿಡಿಯೋ)

 

ಕೃಪೆ:ANI NEWS

ವೆಬ್ದುನಿಯಾವನ್ನು ಓದಿ