ಬ್ರಾಂಡ್ ಬೆಂಗಳೂರು ಪೋರ್ಟಲ್ ಬಿಡುಗಡೆ ಮಾಡಿದ ಡಿಸಿಎಂ ಡಿಕೆ ಶಿವಕುಮಾರ್

ಬುಧವಾರ, 21 ಜೂನ್ 2023 (20:43 IST)
ಕರ್ನಾಟಕದ ನಿವಾಸಿಗಳು ಎಲ್ಲೆಲ್ಲಿ ವಾಸವಾಗಿದೀರಾ ನಿಮ್ಮ ಅಭಿಪ್ರಾಯ ತಿಳಿಸಿ.ಬ್ರಾಂಡ್ ಬೆಂಗಳೂರಿಗಾಗಿ ನಿಮ್ಮ ಅಭಿಪ್ರಾಯ ಅಗತ್ಯವಿದೆ.ವಿದೇಶದಲ್ಲಿರುವ ಕನ್ನಡಿಗರು ಕೂಡ ಅಭಿಪ್ರಾಯ ನೀಡಬಹುದು.ಎಲ್ಲ ಅಭಿಪ್ರಾಯವನ್ನು ಪುಸ್ತಕದಲ್ಲಿ ಸಂಗ್ರಹ ಮಾಡ್ತಿವಿ.ಬೆಂಗಳೂರಿಗಿಂತ  ಮುಂಬೈ ಮತ್ತು ದೆಹಲಿಯಲ್ಲಿ ಟ್ರಾಫಿಕ್ ಸಮಸ್ಯೆ ಜಾಸ್ತಿ ಇದೆ.ದೆಹಲಿ ಟ್ರಾಫಿಕ್ ಇಂದ ನನ್ನ ಫ್ಲೈಟ್ ಮಿಸ್ ಆಗಿತ್ತು.ಮುಂಬೈ ಹಾಗೂ ದೆಹಲಿ ಟ್ರಾಫಿಕ್ ಬಗ್ಗೆ ಯಾರು ಬರೆಯುವುದಿಲ್ಲ.ಆದ್ರೆ ಬೆಂಗಳೂರಿನ ಟ್ರಾಫಿಕ್ ಬಗ್ಗೆನೇ ಜಾಸ್ತಿ ಬರೆಯುತ್ತಾರೆ.ಬೆಂಗಳೂರಿನಲ್ಲಿ ಸ್ವಲ್ಪ ಮಳೆ ಬಂದು ನೀರು ಬಂದ್ರೆ ಸಾಕು ಅದರೆ ಬಗ್ಗೆ ಕೂಡ ಪ್ರಶ್ನೆ ಮಾಡ್ತಾರೆ ಎಂದು ಡಿಸಿಎಂ ಡಿಕೆ ಶಿವಕುಮಾರ್ ಹೇಳಿದ್ದಾರೆ.
 
ಅಲ್ಲದೇ ಇಂದು ಬ್ರಾಂಡ್ ಬೆಂಗಳೂರು ಪೋರ್ಟಲ್ ಬಿಡುಗಡೆ ಮಾಡ್ತಿದ್ದೆನೆ.ಬೆಂಗಳೂರು ಫುಟ್ ಪಾತ್ ಗಮನಿಸಿದ್ದೇನೆ.ಮಲ್ಲೇಶ್ವರದಲ್ಲಿ ಫುಟ್ ಪಾತ್ ಇದೆ, ಆದ್ರೆ ನಡೆಯಲು ಆಗದಂತಿದೆ.ಗಾಂಧಿ ಬಜಾರ್ ಕೂಡ ಹಾಗೇ ಇದೆ.ಎಲ್ಲೆಡೆ ಅಂಗಡಿ ಇಟ್ಟುಕೊಂಡಿದ್ದಾರೆ.ಫುಟ್ ಪಾತ್ ವ್ಯಾಪಾರಿಗಳಿಗೆ ಆದ್ಯತೆ ಕೊಟ್ಟು, ಪಾದಚಾರಿಗಳು ರಸ್ತೆಗೆ ಬರ್ತಿದ್ದಾರೆ.ಅದರ ಸಮಸ್ಯೆ ಹೇಗೆ ಬಗೆಹರಿಸಬೇಕು ಅಂತ ನೋಡ್ತಿದ್ದೇವೆ.ಬೆಂಗಳೂರು ಟ್ರಾಫಿಕ್ ನಿವೃತ್ತ ಪೋಲೀಸರ ಕರೆದು ಚರ್ಚೆ ಮಾಡ್ತೀನಿ.ಟ್ರಾಫಿಕ್ ಮ್ಯಾನೇಜ್ಮೆಂಟ್ ಬಗ್ಗೆ ಸಲಹೆ ಪಡೆಯುತ್ತೇನೆ.
 
ಗೃಹಸಚಿವರ ಜೊತೆ ಕೂಡ ಮಾತಾಡಿದ್ದೇನೆ.ಎಲ್ಲರ ಸಲಹೆ ಪಡೆಯುತ್ತೇನೆ.ಕೆಲವರು ಟನಲ್ ಸಲಹೆ ನೀಡಿದ್ದಾರೆ.ನಮ್ಮ ರಾಜ್ಯದವರು ಬೇರೆ ಕಡೆ ಹೋಗಿ ಟನಲ್ ಮಾಡಿದ್ದಾರೆ.ಜಯದೇವ ಆಸ್ಪತ್ರೆ ಪಕ್ಕದಲ್ಲಿ ಪೈಲೆಟ್ ಪ್ರಾಜೆಕ್ಟ್ ನೋಡುತ್ತಿದ್ದೇವೆ.ರೈಲು, ಬಸ್ ಎರಡೂ ಕೂಡ ಹೋಗುತ್ತಿದೆ.ನಮ್ಮ ಬೆಂಗಳೂರಿನ ಬಗ್ಗೆ ಗೌರವ ಇರುವ ಎಲ್ಲಾ ನಾಗರೀಕರಿಗೆ ಮನವಿ ಮಾಡ್ತೀನಿ.www.brandbengaluru.karnataka.gov.in ಗೆ ಸಲಹೆ ನೀಡಿ.ನಮ್ಮಲ್ಲಿ ಬೇರೆ ರಾಜ್ಯದ ರೀತಿ ಪ್ಲಾನ್ ಸಿಟಿ ಇಲ್ಲ.ಜಯನಗರ ಕೆಲವೆಡೆ ಬಿಟ್ರೆ ರಸ್ತೆ ಪ್ಲಾನ್ ಇಲ್ಲ.ದೆಹಲಿ, ಮುಂಬೈ ಪ್ರವಾಸ ಮಾಡಿದ್ದೇನೆ.ನಮಗಿಂತ ಬಹಳ ಕೆಟ್ಟ ಟ್ರಾಫಿಕ್ ಇದೆ.ಇಲ್ಲಿನ ಟ್ರಾಫಿಕ್‌ಗೆ ಸಿಲುಕಿ ನನಗೆ ಫ್ಲೈಟ್ ಮಿಸ್ ಆಗಿದೆ.ರಸ್ತೆ ಸಮಸ್ಯೆ ಎಲ್ಲದರ ಬಗ್ಗೆ ಬೆಂಗಳೂರಿನ ಸಮಸ್ಯೆ ಬಗ್ಗೆ ಹೆಚ್ಚು ಸುದ್ದಿ ಮಾಡ್ತಾರೆ.ಬೆಂಗಳೂರನ್ನ ಎಲ್ಲರೂ ನೋಡ್ತಿದ್ದಾರೆ.ಜುಲೈ 15 ರ ಒಳಗೆ ಸಾರ್ವಜನಿಕರು ಸಲಹೆ ಕೊಡಬಹುದು ಎಂದು ಡಿಕೆ ಶಿವಕುಮಾರ್ ಹೇಳಿದ್ರು.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ