ಈ ರೋಗಕ್ಕೆ ಬೆಂಡಾದ ಅಡಿಕೆ ಬೆಳೆಗಾರರು

ಶನಿವಾರ, 5 ಅಕ್ಟೋಬರ್ 2019 (20:07 IST)
ರಾಜ್ಯದ ಕರಾವಳಿಯಲ್ಲಿ ಈ ಬಾರಿ ಅತಿವೃಷ್ಠಿಯಿಂದಾಗಿ ಅಡಿಕೆ ಬೆಳೆಗೆ  ಕೊಳೆ ರೋಗ ಬಂದಿದೆ. ಅಡಿಕೆ ಬೆಳೆಗಾರರು ಆತಂಕದಲ್ಲಿದ್ದಾರೆ. ರೈತರ ನೆರವಿಗೆ ರಾಜ್ಯ ಹಾಗೂ ಕೇಂದ್ರ ಸರಕಾರ ಧಾವಿಸುತ್ತಾ ಎಂಬುದನ್ನು  ಬೆಳೆಗಾರರು ಕಾಯುವಂತಾಗಿದೆ.

ರಾಜ್ಯದ ಕರಾವಳಿಯಲ್ಲಿ ಈ ಬಾರಿ ಮುಂಗಾರು ಮಳೆ ತೀವ್ರಗೊಂಡಿತ್ತು. ಆಗಸ್ಟ್ ಹಾಗೂ ಸೆಪ್ಟಂಬರ್ ನಲ್ಲಿ ಸುರಿದ ಮಳೆಗೆ ಅಡಿಕೆ ಮರಕ್ಕೆ ಕೊಳೆ ರೋಗ ತಗುಲಿದೆ. ಇದರಿಂದಾಗಿ ಅಡಿಕೆ ಬೆಳೆಗಾರರಿಗೆ ಭಾರೀ ನಷ್ಟ ಉಂಟಾಗಿದೆ.  ಕರಾವಳಿಯಲ್ಲಿ ಸುಮಾರು 50 ಸಾವಿರಕ್ಕೂ ಹೆಚ್ಚು ಮಂದಿ ಅಡಿಕೆ ಬೆಳೆಗಾರರು ಇದ್ದಾರೆ. ಅಡಿಕೆ ಬೆಳೆ ನಂಬಿ ಅವರು ಜೀವನ ಮಾಡುತ್ತಿದ್ದಾರೆ. ಕಳೆದ ವರ್ಷವೂ ಭಾರೀ ಮಳೆಯಾದ  ಕಾರಣ ಅಡಿಕೆ ಬೆಳೆಗೆ ಕೊಳೆ ರೋಗ ಬಂದಿತ್ತು.  

ಆಗಲೂ ರೈತರಿಗೆ ಭಾರೀ ನಷ್ಟವುಂಟಾಗಿತ್ತು. ಲಕ್ಷಾಂತರ ಮಂದಿ ಅಡಿಕೆ ಬೆಳೆಗಾರರು ಈಗಾಗಲೇ ಸಾಲ ಮಾಡಿ ಜೀವನ ನಡೆಸುತ್ತಿದ್ದಾರೆ. ಈ ಬಾರಿ ಅಡಿಕೆ ಬೆಳೆಗೆ ಕೊಳೆ ರೋಗ ತಗುಲಿರುವುದರಿಂದ ರೈತರು ಮತ್ತಷ್ಟು ಆತಂಕಕ್ಕೆ ಸಿಲುಕಿದ್ದಾರೆ. ಕೇಂದ್ರ ಹಾಗೂ ರಾಜ್ಯ ಸರಕಾರಗಳು ರೈತರ ನೆರವಾಗಿ ಧಾವಿಸುತ್ತವೆಯೇ ಅಂತ ಬೆಳೆಗಾರರು ಕಾಯುತ್ತಿದ್ದಾರೆ.


ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ