ಜನವರಿ 24ರಂದು ರಾಜ್ಯಾದ್ಯಂತ ಕೇಬಲ್ ಪ್ರಸಾರ ಸ್ಥಗಿತ

ಗುರುವಾರ, 17 ಜನವರಿ 2019 (13:17 IST)
ಬೆಂಗಳೂರು : ಭಾರತೀಯ ದೂರ ಸಂಪರ್ಕ  ನಿಯಂತ್ರಣ ಪ್ರಾಧಿಕಾರದ(ಟ್ರಾಯ್) ಹೊಸ ದರ ನಿಗದಿ ನಿಯಮವನ್ನು ಖಂಡಿಸಿ ಮತ್ತು ಕೇಬಲ್ ಆಪರೇಟರ್‌ ಗಳ ಉಳಿವಿಗಾಗಿ ಜನವರಿ 24ರಂದು ರಾಜ್ಯಾದ್ಯಂತ ಕೇಬಲ್ ಬಂದ್ ಆಗಲಿದ್ದು, ಅಂದು ಬೆಳಗ್ಗೆ 6 ರಿಂದ ರಾತ್ರಿ 10ರವರೆಗೆ ಕೇಬಲ್ ಪ್ರಸಾರ ಸ್ಥಗಿತಗೊಳ್ಳಲಿದೆ.

ಹೌದು. ರಾಜ್ಯ ಕೇಬಲ್ ಆಪರೇಟರ್ಸ್ ಅಸೋಸಿಯೇಷನ್‍ ಸಭೆ ನಡೆಸಿ ಒಮ್ಮತದಿಂದ  ಈ ನಿರ್ಧಾರ ತೆಗೆದುಕೊಳ್ಳಲಾಗಿದ್ದು, ಈ ಬಗ್ಗೆ ಮಾತನಾಡಿದ ರಾಜ್ಯ ಕೇಬಲ್ ಅಸೋಸಿಯೇಷನ್ ಅಧ್ಯಕ್ಷರು, ‘ಟ್ರಾಯ್ ನ ಹೊಸ ನೀತಿಯಿಂದ ಗ್ರಾಹಕರಿಗೆ ಹೊರೆಯಾಗಲಿದೆ. ಕಡಿಮೆ ಚಾನೆಲ್ ನೋಡಿ ಸಾವಿರದ ತನಕ ಹಣ ಕಟ್ಟುವಂತೆ ಗ್ರಾಹಕರ ಮೇಲೆ ಹೊರೆ ಹೊರಿಸಲಾಗಿದೆ.


ಅಲ್ಲದೇ ಶೇ.18 ಜಿಎಸ್ ಟಿ ಸಹ ಗ್ರಾಹಕರ ಮೇಲೆ ಹೇರಲಾಗಿದೆ. ಅವರ ಮನೆಯಲ್ಲಿ ಕುಳಿತು ಟಿವಿ ನೋಡುವುದಕ್ಕೆ ತೆರಿಗೆ ಕಟ್ಟಬೇಕು’ ಎಂದು  ಹೇಳಿದ್ದಾರೆ.


 

ಅಲ್ಲದೇ 300 ರೂ.ಗೆ 400 ಕ್ಕೂ ಹೆಚ್ಚಿನ ಚಾನೆಲ್ ಗಳನ್ನು ಕೇಬಲ್ ಆಪರೇಟರ್ ಗಳು ನೀಡುತ್ತಿದ್ದಾರೆ. ಟ್ರಾಯ್ ಹೊಸ ನೀತಿಯಿಂದ ಗ್ರಾಹಕರು ಕೇಬಲ್ ಗಾಗಿ 1 ಸಾವಿರ ರೂ.ಗಿಂತಲೂ ಹೆಚ್ಚಿನ ಹಣವನ್ನು ಕಟ್ಟಬೇಕು. ಟ್ರಾಯ್ ಗ್ರಾಹಕ ವಿರೋಧಿ ಧೋರಣೆ ಖಂಡಿಸಿ ಪ್ರತಿಭಟನೆ ನಡೆಸುವ ಸಲುವಾಗಿ ವಾಹಿನಿಗಳ ಪ್ರಸಾರವನ್ನು ಸ್ಥಗಿತಗೊಳ್ಳಿಸುತ್ತೇವೆ ಎಂದು ತಿಳಿಸಿದ್ದಾರೆ.

 

ತಾಜಾ ಸುದ್ದಿಗಳನ್ನು ಓದಲು ವೆಬ್ದುನಿಯಾ ಮೊಬೈಲ್ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ