ಲಾಕ್ ಡೌನ್ ಮುಂದುವರಿಯುತ್ತೆ ಎಂದು ಎಚ್ಚರಿಸಿದ ಬಿ.ಎಸ್.ಯಡಿಯೂರಪ್ಪ

ಸೋಮವಾರ, 30 ಮಾರ್ಚ್ 2020 (18:17 IST)
ದೇಶದಲ್ಲಿ ಕೊರೊನಾ ವೈರಸ್ ನಿಯಂತ್ರಣಕ್ಕಾಗಿ ಲಾಕ್ ಡೌನ್ ಮಾಡಲಾಗಿದೆ. ಆದರೂ ರಾಜ್ಯದಲ್ಲಿ ಜನರು ನಿರ್ಲಕ್ಷ್ಯ ತೋರಿ ಹೊರಗಡೆ ತಿರುಗಾಡುತ್ತಿದ್ದಾರೆ. ಇದರಿಂದ ಗರಂ ಆಗಿರೋ ಸಿಎಂ ಬಿ.ಎಸ್.ಯಡಿಯೂರಪ್ಪ ಜನತೆಗೆ ಖಡಕ್ ಎಚ್ಚರಿಕೆ ನೀಡಿದ್ದಾರೆ.

ರಾಜ್ಯದ ಎಲ್ಲ ಜನರೂ ಲಾಕ್ ಡೌನ್ ನ್ನು ಕಡ್ಡಾಯವಾಗಿ ಹಾಗೂ ಕಟ್ಟುನಿಟ್ಟಾಗಿ ಪರಿಪಾಲನೆ ಮಾಡಲೇಬೇಕು. ಹೀಗಾದಾಗ ಮಾತ್ರ ಏಪ್ರಿಲ್ 14 ರಂದು ಇದು ಕೊನೆಯಾಗುತ್ತದೆ. ಆದರೆ ಜನರು ಮನೆಯಿಂದ ವಿನಾಕಾರಣ ಹೊರಗೆ ಬಂದು ತಿರುಗಾಡುವುದನ್ನು ಮುಂದುವರಿಸಿದರೆ ಲಾಕ್ ಡೌನ್ ಮುಂದುವರೆಯಲಿದೆ ಅಂತ ಸಿಎಂ ಹೇಳಿದ್ದಾರೆ.

ಇನ್ನೂ 16 ದಿನ ಮನೆಯಲ್ಲೇ ಇರಿ. ಮನೆಯಲ್ಲೇ ಇದ್ದು ಲಾಕ್ ಡೌನ್ ಶೀಘ್ರ ಕೊನೆಗೊಳ್ಳಲು ಸಹಕಾರ ನೀಡಿ. ಬೀದಿಗೆ ಬಂದು ಅಡ್ಡಾಡಿದರೆ ಲಾಕ್ ಡೌನ್ ಮುಂದುವರಿಸೋದು ಖಂಡಿತ ಎಂದು ಸಿಎಂ ಬಿ.ಎಸ್.ಯಡಿಯೂರಪ್ಪ ಹೇಳಿದ್ದಾರೆ.


ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ