ರಾಹುಲ್ ಗಾಂಧಿಗೆ ಬಿಎಸ್ ಯಡಿಯೂರಪ್ಪ ಬೀಳ್ಕೊಡುಗೆ!

ಬುಧವಾರ, 14 ಫೆಬ್ರವರಿ 2018 (09:45 IST)
ಬೆಂಗಳೂರು: ರಾಜ್ಯಕ್ಕೆ ಬಂದಿದ್ದ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿಗೆ ಬಿಜೆಪಿ ನಾಯಕ ಬಿಎಸ್ ಯಡಿಯೂರಪ್ಪ ವಿಶಿಷ್ಟವಾಗಿ ಬೀಳ್ಕೊಡುಗೆ ನೀಡಿದ್ದಾರೆ.
 

ಟ್ವಿಟರ್ ನಲ್ಲಿ ರಾಹುಲ್ ಗೆ ವ್ಯಂಗ್ಯವಾಗಿ ಬಿಎಸ್ ವೈ ಟಾಂಗ್ ಕೊಟ್ಟಿದ್ದಾರೆ. ರಾಹುಲ್ ಗಾಂಧಿಗೆ ರಾಜ್ಯಕ್ಕೆ ಬಂದಾಗಿನಿಂದ ಟ್ವಿಟರ್ ನಲ್ಲಿ ಟಾಂಗ್ ನೀಡುತ್ತಲೇ ಇದ್ದ ಬಿಎಸ್ವೈ ಇದೀಗ ಬೀಳ್ಕೊಡುಗೆಯನ್ನೂ ಟ್ವಿಟರ್ ಮೂಲಕ ವ್ಯಂಗ್ಯವಾಗಿಯೇ ಮಾಡಿದ್ದಾರೆ.

ರಾಹುಲ್ ಗಾಂಧಿಯವರೇ ಜನಾಶೀರ್ವಾದ ಯಾತ್ರೆ ನೆಪದಲ್ಲಿ ನಿಮ್ಮ ಚುನಾವಣಾ ವಿಹಾರ ನಮಗೆ ಅದೃಷ್ಟ. ಮುಂದಿನ ಬಾರಿ ಬರುವಾಗ ಭಾಷಣಕ್ಕೆ ಹೊಸ ವಿಷಯ ಹುಡುಕಿಕೊಂಡು ಬನ್ನಿ. ಗುಜರಾತ್, ಉತ್ತರ ಪ್ರದೇಶ ಗುಂಗಿನಿಂದ ಹೊರ ಬನ್ನಿ’ ಎಂದು ವ್ಯಂಗ್ಯ ಟ್ವೀಟ್ ಮೂಲಕ ಬಿಎಸ್ ವೈ ರಾಹುಲ್ ಗೆ ಬೀಳ್ಕೊಡುಗೆ ನೀಡಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ