ಬಿಎಸ್‌ವೈ, ಸವದಿಗೆ ಮಾನ ಮರ್ಯಾದೆ ಇದ್ರೆ ರಾಜಕೀಯ ನಿವೃತ್ತಿ ಘೋಷಿಸಲಿ: ಸಿದ್ದರಾಮಯ್ಯ

ಶುಕ್ರವಾರ, 30 ಜೂನ್ 2017 (16:13 IST)
ಭ್ರಷ್ಟಾಚಾರದ ಆರೋಪದ ಮೇಲೆ ಜೈಲಿಗೆ ಹೋಗಿರುವ ಯಡಿಯೂರಪ್ಪ, ಸದನದಲ್ಲಿ ಬ್ಲ್ಯೂಫಿಲ್ಮ್ ನೋಡಿದ ಅಥಣಿ ಶಾಸಕ ಲಕ್ಷ್ಮಣ್ ಸವದಿಗೆ ಮಾನ ಮರ್ಯಾದೆ ಇದ್ರೆ ರಾಜಕೀಯ ನಿವೃತ್ತಿ ಘೋಷಿಸಲಿ ಎಂದು ಸಿಎಂ ಸಿದ್ದರಾಮಯ್ಯ ವಾಗ್ದಾಳಿ ನಡೆಸಿದ್ದಾರೆ.
 
ಬೆಳಗಾವಿ ಜಿಲ್ಲೆಯ ಅಥಣಿ ಪಟ್ಟಣದಲ್ಲಿ ಆಯೋಜಿಸಲಾದ ಕಾಂಗ್ರೆಸ್ ಸಮಾವೇಶದಲ್ಲಿ ಮಾತನಾಡಿದ ಅವರು, ಭ್ರಷ್ಟಾಚಾರದ ಆರೋಪದ ಮೇಲೆ ಜೈಲಿಗೆ ಹೋದ ಯಡಿಯೂರಪ್ಪ, ಬ್ಲ್ಯೂಫಿಲ್ಮ್ ನೋಡಿದ ಶಾಸಕ ಲಕ್ಷ್ಮಣ್ ಸವದಿಯಂತಹ ನಾಯಕರಿರುವ ಬಿಜೆಪಿಯನ್ನು ದೂರವಿಡಿ ಎಂದು ಕರೆ ನೀಡಿದರು.
 
ಚೆಕ್ ಮೂಲಕ ಭ್ರಷ್ಟಾಚಾರದ ಹಣ ಪಡೆದವರಲ್ಲಿ ದೇಶದಲ್ಲಿಯೇ ಯಡಿಯೂರಪ್ಪ ಮೊದಲನೇ ಸ್ಥಾನ ಪಡೆದಿದ್ದಾರೆ ಎಂದು ಲೇವಡಿ ಮಾಡಿದರು. 
 
ಬಿಜೆಪಿ ಜಾತಿಯ ಹೆಸರಲ್ಲಿ ಸಮಾಜವನ್ನು ಒಡೆಯುತ್ತಿದೆ. ಕೋಮುವಾದವೇ ಬಿಜೆಪಿಯ ಮುಖ್ಯ ತಿರುಳಾಗಿದೆ. ಸಮಾಜಗಳಲ್ಲಿ ಒಡಕು ಉಂಟು ಮಾಡಿ ಅದರ ಲಾಭ ಪಡೆಯುವುದೇ ಬಿಜೆಪಿ ನಾಯಕರ ಕಾಯಕವಾಗಿದೆ ಎಂದು ತಿರುಗೇಟು ನೀಡಿದರು.  
 
ಪ್ರಧಾನಿ ಮೋದಿ ವಿರುದ್ಧವು ವಾಗ್ದಾಳಿ ನಡೆಸಿದ ಸಿಎಂ,  3 ವರ್ಷದಲ್ಲಿ 6 ಕೋಟಿ ಉದ್ಯೋಗ ಸೃಷ್ಟಿ ಮಾಡ್ತೀವಿ ಎಂದು ಹೇಳಿದ್ದರು ಆದರೆ, ಕೇವಲ 4 ಲಕ್ಷ ಉದ್ಯೋಗಗಳನ್ನು ಸೃಷ್ಟಿಸಿದ್ದಾರೆ. ಕಾಂಗ್ರೆಸ್ ಸರಕಾರದ ಜನಪರ ಯೋಜನೆಗಳನ್ನು ತಮ್ಮದು ಎಂದು ಮೋದಿ ಸರಕಾರ ಹೇಳುತ್ತಿರುವುದಾಗಿ ವ್ಯಂಗ್ಯವಾಡಿದರು.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ. 

ವೆಬ್ದುನಿಯಾವನ್ನು ಓದಿ