ಬುರ್ಕಾನೇ ಮುಖ್ಯ, ಸಿಂಧೂರ ತೆಗೆಸಿ ಎಂದ ವಿದ್ಯಾರ್ಥಿನಿಯರು!

ಶುಕ್ರವಾರ, 18 ಫೆಬ್ರವರಿ 2022 (09:09 IST)
ಕೋಲಾರ : ಹಿಜಬ್ ವಿವಾದ ಕೋಲಾರದಲ್ಲಿ 2ನೇ ದಿನವೂ ಮುಂದುವರೆದಿದ್ದು, ಹಿಜಬ್ ಧರಿಸಿ ಬಂದ ವಿದ್ಯಾರ್ಥಿಗಳನ್ನು ತರಗತಿಗಳಿಗೆ ಅನುಮತಿ ನೀಡದ ಹಿನ್ನೆಲೆ ವಿದ್ಯಾರ್ಥಿಗಳು ವಾಪಸ್ ಆದ ಸನ್ನಿವೇಶ ನಡೆಯಿತು.
 
ಕೋಲಾರ ನಗರದ ಸರ್ಕಾರಿ ಜೂನಿಯರ್ ಕಾಲೇಜಿಗೆ ಹಿಜಬ್ ತೆಗೆಯದೆ ಕಾಲೇಜಿಗೆ ಬಂದ ವಿದ್ಯಾರ್ಥಿನಿಯರನ್ನು ಪ್ರಾಂಶುಪಾಲರು ತಡೆದು ವಾಪಸ್ಸು ಕಳುಹಿಸಿದರು. ಈ ವೇಳೆ ಕಾಲೇಜಿನ ಹೊರ ನಡೆದ ಮೂರು ವಿದ್ಯಾರ್ಥಿನಿಯರು ಹಿಜಬ್ ತೆಗೆಯಲು ನಿರಾಕರಸಿ ಕಾಲೇಜಿನಿಂದ ಮನೆಯತ್ತ ತೆರಳಿದ್ರು. ನಮಗೆ ಧರ್ಮ ಮತ್ತು ಹಿಜಬ್ ಮುಖ್ಯವಾಗಿದೆ ಎಂದು ವಾದ ಮಾಡಿದರು.

ಒಂದು ವೇಳೆ ಕೋರ್ಟ್ ಆದೇಶ ಬಂದ್ರೆ ಅದಕ್ಕೆ ತಲೆ ಭಾಗುವೆ. ಆದ್ರೆ ನಾವು ನಮ್ಮ ಧರ್ಮದಂತೆ ಹಿಜಬ್ ಹಾಗೂ ಬುರ್ಕಾ ಧರಿಸಿ ಬರುತ್ತಿದ್ದೇವೆ. ನಮಗೆ ಬುರ್ಕಾ ತೆಗೆಯಲು ತಿಳಿಸಿದ್ರೆ, ಹಿಂದೂ ವಿದ್ಯಾರ್ಥಿನಿಯರು ಸಹ ಸಿಂಧೂರ, ಮೂಗುತಿ ಬಿಚ್ಚಿಟ್ಟು ಕಾಲೇಜಿಗೆ ಬರಲಿ. ನಮಗೊಂದು ಅವರಿಗೊಂದು ನ್ಯಾಯ ಎಂದು ವಿದ್ಯಾರ್ಥಿನಿ ಒತ್ತಾಯಿಸಿದರು.

 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ