ಕಾಂಗ್ರೆಸ್ ಬಸ್ ಯಾತ್ರೆಗೆ ಸಜ್ಜಾಗಿದೆ ಬಸ್

ಮಂಗಳವಾರ, 10 ಜನವರಿ 2023 (15:28 IST)
ಪ್ರಜಾಧ್ವನಿ ಹೆಸರಿನಲ್ಲಿ ಕಾಂಗ್ರೆಸ್  ಬಸ್ ಯಾತ್ರೆಗೆ ಸಿದ್ದವಾಗಿದೆ.ನಾಳೆ ಡಿಕೆಶಿ-ಸಿದ್ದು  ಬಸ್ ಯಾತ್ರೆ ಮಾಡಲಿದ್ದಾರೆ.ಚಿಕ್ಕೋಡಿಯಿಂದ ಬಸ್ ಯಾತ್ರೆ ನಾಳೆಯಿಂದ ಆರಂಭವಾಗಲಿದೆ.ಚಿಕ್ಕೋಡಿ ಹಾಗೂ ಬೆಳಗಾವಿಯಲ್ಲಿ ಸಮಾವೇಶ ನಡೆಯಲಿದೆ.12 ರಿಂದ 15 ರವೆಗೆ ಸಂಕ್ರಾಂತಿ ಹಬ್ಬದ ಕಾರಣ ರಜೆ ನೀಡಲಾಗಿದ್ದು,ಜನವರಿ 17 ಹೊಸಪೇಟೆ - ಕೊಪ್ಪಳದಲ್ಲಿ ಸಮಾವೇಶ ನಡೆಯಲಿದೆ.ಜನವರಿ 18 - ಬಾಗಲಕೋಟೆ, ಗದಗ  ,ಜನವರಿ 19 - ಹಾವೇರಿ, ದಾವಣಗೆರೆ ,ಜನವರಿ 21 - ಹಾಸನ, ಚಿಕ್ಕಮಗಳೂರು ಜನವರಿ 22 - ಉಡುಪಿ, ಮಂಗಳೂರು ,ಜನವರಿ 23 - ಕೋಲಾರ, ಚಿಕ್ಕಬಳ್ಳಾಪುರ ,ಜನವರಿ 24 - ತುಮಕೂರು, ದೊಡ್ಡಬಳ್ಳಾಪುರ ಜನವರಿ 26 - ಚಾಮರಾಜನಗರ, ಮೈಸೂರು ,ಜನವರಿ - 27 - ಮಂಡ್ಯ, ರಾಮನಗರ ,ಜನವರಿ - 28 -  ಯಾದಗಿರಿ, ಬೀದರ್ ನಲ್ಲಿ ಸಮಾವೇಶ ನಡೆಯಲಿದೆ.
 
ಕನ್ನಡ ಬಾವುಟದ ಬಣ್ಣ ಹೊಂದಿರುವ ಬಸ್ ಸಿದ್ದವಾಗಿದೆ.ಬಸ್ ಗೆ ರಾಷ್ಟ್ರೀಯ ಹಾಗೂ ರಾಜ್ಯ ನಾಯಕರ ಭಾವಚಿತ್ರಗಳನ್ನು ಅಳವಡಿಸಲಾಗಿದೆ.ಕರುನಾಡಿಗಾಗಿ ಕೈ ಜೋಡಿಸಲು, 9537224224 ಗೆ ಕರೆ‌ಮಾಡಿ ಅಥಾವಾ www.prajadhwani.comಗೆ ಭೇಟಿ ಕೊಡಿ‌ ಎಂದು ಬಸ್ ಮೇಲೆ ಸ್ಟಿಕರಿಂಗ್ ಮಾಡಿಸಲಾಗಿದೆ.ಪ್ರಗತಿಯೇ ನಮ್ಮ ಪ್ರಮಾಣ ಎಂದು ಘೋಷ್ಯವಾಕ್ಯ ಕಾಂಗ್ರೆಸ್ ಬರೆಸಿದೆ.

ವೆಬ್ದುನಿಯಾವನ್ನು ಓದಿ