ಗಣೇಶ ಹಬ್ಬ ಬಳಿಕ ಬಸ್ ಪ್ರಯಾಣಿಕರಿಗೆ ಕಾದಿದೆ ಶಾಕ್

ಸೋಮವಾರ, 10 ಸೆಪ್ಟಂಬರ್ 2018 (09:28 IST)
ಬೆಂಗಳೂರು: ಗಣೇಶ ಹಬ್ಬ ಮುಗಿದ ಬಳಿಕ ಬಸ್ ಪ್ರಯಾಣ ದರ ಏರಿಕೆಯಾಗುವ ಸಾಧ‍್ಯತೆಯಿದ್ದು ಪ್ರಯಾಣಿಕರಿಗೆ ಶಾಕ್ ಕಾದಿದೆ.

ಹಬ್ಬದ ಬಳಿಕ ಬಸ್ ಪ್ರಯಾಣ ದರವನ್ನು ಶೇ.18 ರಷ್ಟು ಹೆಚ್ಚಳ ಮಾಡುವುದು ಅನಿವಾರ್ಯವಾಗಿದೆ ಎಂದು ಸಾರಿಗೆ ಸಚಿವ ಎನ್ ತಮ್ಮಣ್ಣ ಸ್ಪಷ್ಟಪಡಿಸಿದ್ದಾರೆ.

ಬಸ್ ಪ್ರಯಾಣ ದರ ಏರಿಕೆಯಿಂದ ಜನ ಸಾಮಾನ್ಯರಿಗೆ ತೊಂದರೆಯಾಗುವುದು ನಿಜ. ಆದರೆ ಪದೇ ಪದೇ ತೈಲ ಬೆಲೆ ದುಬಾರಿಯಾಗುತ್ತಿರುವುದರಿಂದ ದರ ಏರಿಕೆ ಮಾಡದೇ ವಿಧಿಯಿಲ್ಲ ಎಂದು ಸಚಿವರು ಹೇಳಿದ್ದಾರೆ. ಮೂರು ತಿಂಗಳಿನಿಂದ ದರ ಏರಿಕೆ ಪ್ರಸ್ತಾವನೆ ಚರ್ಚೆಯಲ್ಲಿದ್ದು, ಹಬ್ಬದ ಬಳಿಕ ದರ ಏರಿಕೆಯಾಗುವುದು ನಿಶ್ಚಿತವಾಗಲಿದೆ.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.     

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ