ಕೆ.ಜಿ ರಸ್ತೆಯಲ್ಲಿ ಗುಂಡಿಗಳದ್ದೇ ಹಾವಳಿ

ಶುಕ್ರವಾರ, 17 ಜೂನ್ 2022 (19:45 IST)
ನಗರದಲ್ಲಿ ಮಳೆಯಿಂದ ರಸ್ತೆ ಗುಂಡಿಗಳಿಗೆ ಹಾಕಿದ್ದ ತೇಪೆ ಕಿತ್ತು ಬಂದಿದ್ದು, ಕಳಪೆ ಕಾಮಗಾರಿಯ ಬಣ್ಣ ಬಯಲಾಗಿದೆ. ಬಿಬಿಎಂಪಿ ವ್ಯಾಪ್ತಿಯ ಯಾವುದೇ ರಸ್ತೆಗೆ ಕಾಲಿಟ್ಟರೂ ಗುಂಡಿ ಬಿದ್ದು ಅಧ್ವಾನವಾಗಿರುವ ರಸ್ತೆಗಳೇ ಸ್ವಾಗತ ಕೋರುತ್ತಿವೆ. ಮೆಜೆಸ್ಟಿಕ್ ನ ಕೆ.ಜಿ ರಸ್ತೆಯುಲ್ಲಿ ಗುಂಡಿಬಿದ್ದಿದ್ದು  ವಾಹನ ಸವಾರರು ಪರದಾಡು ಪರಸ್ಥಿತಿ ನಿರ್ಮಾಣವಾಗಿದೆ. ಕಳೆದ ಮೂರು ದಿನಗಳ ಹಿಂದೆ ಗುಂಡಿಯನ್ನ ಮುಚ್ಚಲಾಗಿತ್ತು ಆದರೆ ಮತ್ತೆ ಗುಂಡಿಗಳು ಬಾಯ್ತೆರೆದು ಕೊಂಡಿವೆ. ಬಿಬಿಎಂಪಿ ಅಧಿಕಾರಿಗಳು ಬೇಕಾಬಿಟ್ಟಿ ಕಾಮಗಾರಿ ಮಾಡಿ ಮುಗಿಸಿ ಎಡವಟ್ಟು ಮಾಡಿದ್ದಾರೆ. ಅವೈಜ್ಞಾನಿಕವಾಗಿ ಗುಂಡಿಗಳನ್ನು ಮುಚ್ಚುತ್ತಿರುವುದರಿಂದ ಡಾಂಬರು ಕಿತ್ತು ಬಂದು ಮತ್ತೆ ಹೊಂಡ-ಗುಂಡಿಗಳು ನಿರ್ಮಾಣವಾಗುತ್ತಿವೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ