ಟಿಕೆಟ್ ಸಿಗುವವರೆಗೂ ಬಿಎಸ್ ವೈ ಪುತ್ರನ ಅಜ್ಞಾತ ವಾಸ
ಈ ನಡುವೆ ಬಿವೈ ವಿಜಯೇಂದ್ರ ನಿನ್ನೆ ಮಧ್ಯಾಹ್ನ ನಂಜನಗೂಡಿನಿಂದ ಅಜ್ಞಾತ ಸ್ಥಳಕ್ಕೆ ತೆರಳಿದ್ದು, ಟಿಕೆಟ್ ಗೊಂದಲ ಬಗೆ ಹರಿಯುವವರೆಗೂ ಅಜ್ಞಾತ ವಾಸ ಮುಂದುವರಿಸಲಿದ್ದಾರೆ ಎನ್ನಲಾಗಿದೆ. ಕಾರ್ಯಕರ್ತರ ಕೈಗೂ ಸಿಗದಿರಲು ಅವರು ನಿರ್ಧರಿಸಿದ್ದಾರೆ.
ಈ ನಡುವೆ ಬಿಎಸ್ ವೈ ಕುಟುಂಬ ವರ್ಗದವರು ಬಿವೈ ವಿಜಯೇಂದ್ರಗೆ ಟಿಕೆಟ್ ಸಿಗಲೆಂದು ದೇವರ ಮೊರೆ ಹೋಗಿದ್ದು, ಇಂದು ಬೆಳಿಗ್ಗೆಯೇ ಮೈಸೂರಿನ ಪ್ರಮುಖ ದೇವಾಲಯಗಳಲ್ಲಿ ಪೂಜೆ ಸಲ್ಲಿಸಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.