ಉಪ ಚುನಾವಣೆ: ಬಹಿರಂಗ ಪ್ರಚಾರ ಅಂತ್ಯ, ಇನ್ನೇನಿದ್ದರೂ ಮನೆ ಮನೆ ಪ್ರಚಾರ

ಶುಕ್ರವಾರ, 7 ಏಪ್ರಿಲ್ 2017 (18:36 IST)
ಉಪಚುನಾವಣೆ ನಡೆಯುತ್ತಿರುವ ನಂಜನಗೂಡು ಮತ್ತು ಗುಂಡ್ಲುಪೇಟೆ ಕ್ಷೇತ್ರಗಳಲ್ಲಿ ಬಹಿರಂಗ ಪ್ರಚಾರಕ್ಕೆ ತೆರೆ ಬಿದ್ದಿದೆ. ಸಿಎಂ ಸಿದ್ದರಾಮಯ್ಯ ಸೇರಿದಂತೆ ಎಲ್ಲ ರಾಜಕೀಯ ನಾಯಕರು ಕ್ಷೇತ್ರಗಳ್ನ್ನ ಬಿಟ್ಟು ತೆರಳಿದ್ದಾರೆ.

ನೀತಿ ಸಂಹಿತೆ ಪ್ರಕಾರ, ಚುನಾವಣೆಗೂ 2 ದಿನ ಮುನ್ನವೇ ಬಹಿರಂಗ ಪ್ರಚಾರಕ್ಕೆ ತೆರೆ ಬೀಳಲಿದೆ. ಕ್ಷೇತ್ರದ ಮತದಾರರು ಮತ್ತು ಅಭ್ಯರ್ಥಿಗಳನ್ನ ಬಿಟ್ಟು ಬೇರಾವುದೇ ನಾಯಕರು ಉಳಿಯುವಂತಿಲ್ಲ. ಹೀಗಾಗಿ, ಎಲ್ಲ ನಾಯಕರು ಚುನಾಚಣಾ ಕ್ಷೇತ್ರಗಳನ್ನ ಬಿಟ್ಟು ತೆರಳಿದ್ದಾರೆ. ನಾಳೆಯಿಂದ ಅಭ್ಯರ್ಥಿಗಳು ಮನೆ ಮನೆ ಪ್ರಚಾರಕ್ಕೆ ಇಳಿಯಲಿದ್ದಾರೆ. ಏಪ್ರಿಲ್ 9ಕ್ಕೆ ಎರಡೂ ಕ್ಷೇತ್ರಗಳಲ್ಲಿ ಚುನಾವಣೆ ನಡೆಯಲಿದೆ.

ಮುಂದಿನ ವರ್ಷ ನಡೆಯಲಿರುವ ವಿಧಾನಸಭಾ ಚುನಾವಣೆಗೆ ಈ  ಉಪಚುನಾವಣೆಯನ್ನ ಸೆಮಿಫೈನಲ್ ಎಂಬಂತೆ ಎರಡೂ ರಾಷ್ಟ್ರೀಯ ಪಕ್ಷಗಳು ಪರಿಗಣಿಸಿದ್ದು, ಶತಾಯಗತಾಯ ಗೆಲುವಿನ ಪಣ ತೊಟ್ಟಿದ್ದಾರೆ.

ವೆಬ್ದುನಿಯಾವನ್ನು ಓದಿ