ಬೈ ಎಲೆಕ್ಷನ್ ಪ್ರತಿಷ್ಠೆ: ಗೆಲ್ಲೋಕೆ ಕೈ ಪಡೆ ಮಾಸ್ಟರ್ ಪ್ಲಾನ್
ಭಾನುವಾರ, 28 ಏಪ್ರಿಲ್ 2019 (18:18 IST)
ರಾಜ್ಯದ ಚಿಂಚೋಳಿ, ಕುಂದಗೋಳ ಕ್ಷೇತ್ರಗಳ ಸ್ಪರ್ಧೆಯನ್ನು ಕಾಂಗ್ರೆಸ್ ಗಂಭೀರವಾಗಿ ಪರಿಗಣಿಸಿದ್ದು, ಗೆಲ್ಲೋಕೆ ಸಚಿವರಿಗೆ ಟಾಸ್ಕ್ ನೀಡಲಾಗಿದೆ.
ಸಚಿವರು, ಶಾಸಕರಿಗೆ ಟಾಸ್ಕ್ ಕೊಟ್ಟಿದ್ದಾರೆ ಪಕ್ಷದ ಉಸ್ತುವಾರಿ ವೇಣುಗೋಪಾಲ್. ಜಾತಿವಾರು ಸಚಿವರು, ಶಾಸಕರಿಗೆ ಜವಾಬ್ದಾರಿ ನೀಡಲಾಗಿದೆ. ಕುಂದಗೋಳದಲ್ಲಿ ಕುರುಬ, ಲಿಂಗಾಯತರು ಹೆಚ್ಚಿದ್ದಾರೆ. ಹೀಗಾಗಿ ಲಿಂಗಾಯತ, ಕುರುಬ ಸಚಿವರಿಗೆ ಉಸ್ತುವಾರಿ ನೀಡಲಾಗಿದೆ. ಎಂಟಿಬಿ ನಾಗರಾಜು, ಶಿವಾನಂದ ಪಾಟೀಲ್, ಎಂ.ಬಿ. ಪಾಟೀಲರಿಗೆ ಕುಂದಗೋಳದ ಜವಾಬ್ದಾರಿ ವಹಿಸಲಾಗಿದೆ.
ಇನ್ನು ಚಿಂಚೋಳಿಯಲ್ಲಿ ಲಂಬಾಣಿ, ದಲಿತರು ಹೆಚ್ಚು ಸಂಖ್ಯೆಯಲ್ಲಿದ್ದಾರೆ. ಹೀಗಾಗಿ ಲಂಬಾಣಿ, ದಲಿತ ಸಚಿವರಿಗೆ ಜವಾಬ್ದಾರಿ ನೀಡಲಾಗಿದೆ.
ಪಕ್ಷದ ಅಭ್ಯರ್ಥಿ ಗೆಲ್ಲಿಸಿಕೊಂಡು ಬರುವ ಹೊಣೆಯನ್ನು ಪ್ರಿಯಾಂಕ ಖರ್ಗೆ, ರಾಜಶೇಖರ್ ಪಾಟೀಲ್, ರಹೀಂಖಾನ್, ಪಿಟಿ ಪರಮೇಶ್ವರ್ ನಾಯ್ಕಗೆ ವಹಿಸಲಾಗಿದೆ. ಜಿಲ್ಲಾ ಪಂಚಾಯತ್ ಗೆ ಒಬ್ಬ ಸಚಿವರಿಗೆ ಜವಾಬ್ದಾರಿ ನೀಡಲಾಗಿದೆ.
ಒಬ್ಬ ಸಚಿವರಿಗೆ ಇಬ್ಬರು ಶಾಸಕರ ಸಾಥ್ ಸಿಗಲಿದೆ. ಇಡೀ ಕುಂದಗೋಳದ ಜವಾಬ್ದಾರಿಯನ್ನು ಸಚಿವ ಡಿ.ಕೆ.ಶಿವಕುಮಾರ್ ಹೆಗಲಿಗೆ ವಹಿಸಿದ್ರೆ, ಚಿಂಚೋಳಿಯ ಸಂಪೂರ್ಣ ಜವಾವ್ದಾರಿ ಡಿಸಿಎಂ ಡಾ.ಜಿ.ಪರಮೇಶ್ವರ್ ಗೆ ನೀಡಲಾಗಿದೆ.