ಸಿಎಂ ಹೆಚ್.ಡಿ. ಕುಮಾರಸ್ವಾಮಿ ವಿರುದ್ಧ ಕಿಡಿಕಾರಿದ ಸಿ.ಟಿ.ರವಿ
ಸೋಮವಾರ, 19 ನವೆಂಬರ್ 2018 (12:47 IST)
ಬೆಂಗಳೂರು : ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ರೈತ ಮಹಿಳೆ ಬಗ್ಗೆ ನೀಡಿರುವ ಹೇಳಿಕೆ ವಿರುದ್ಧ ಬಿಜೆಪಿ ಮುಖಂಡ ಸಿ.ಟಿ.ರವಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಅವರು ಕೃಷಿ ಸಮ್ಮೇಳನದ ಸಮಾರೋಪ ಸಮಾರಂಭದಲ್ಲಿ ಬೆಳಗಾವಿಯಲ್ಲಿ ಪ್ರತಿಭಟನೆ ನಡೆಸಿದ ಮಹಿಳೆಗೆ ನಾಲ್ಕು ವರ್ಷ ಎಲ್ಲಿ ಮಲಗಿದ್ದೆ ಎಂದು ಪ್ರಶ್ನಿಸಿದ್ದರು.
ಈ ಕುರಿತು ಟ್ವೀಟ್ ಮಾಡಿರುವ ಸಿ.ಟಿ. ರವಿ, ವೋಟಿಗಾಗಿ ಕಪಟ ಕಣ್ಣೀರು ಹಾಕುವ ಕುಮಾರಸ್ವಾಮಿ ಕಬ್ಬಿನ ಬಾಕಿ ಹಣ ಕೇಳಿದ ರೈತರರನ್ನು ಗೂಂಡಾಗಳು ಎಂದು ಕರೆದು ಅವರ ಕಣ್ಣಲ್ಲಿ ರಕ್ತ ಹರಿಸುತ್ತಿರುವುದು ಧೂರ್ತಲಕ್ಷಣವೇ ಅಲ್ಲವೇ? ಎಂದು ಕಿಡಿಕಾರಿದ್ದಾರೆ.
ಅಯೋಗ್ಯಕರ ಕೈಯಲ್ಲಿ ಅಧಿಕಾರ ಇರುವವರೆಗೂ ಇನ್ನೂ ಏನೇನು ನೋಡಲು ಬಾಕಿ ಇದೆಯೋ ಭಗವಂತ? ಕಬ್ಬಹಣ ಕೇಳಿದ ರೈತರು ಗೂಂಡಾಗಳು, ಅಪ್ಪ ಮಕ್ಕಳು ಮಾತ್ರ ಮಣ್ಣಿನ ಮಕ್ಕಳು ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ.