ಸೋನಿಯಾ, ಸಿದ್ದರಾಮಯ್ಯ ಭೇಟಿ ಅಂತ್ಯ: ಸಭೆ ಅಪೂರ್ಣ

ಶುಕ್ರವಾರ, 17 ಜೂನ್ 2016 (17:44 IST)
ಕಾಂಗ್ರೆಸ್ ಪಕ್ಷದ ಅಧಿನಾಯಕಿ ಸೋನಿಯಾ ಗಾಂಧಿಯವರೊಂದಿಗೆ ಸಂಪುಟ ಪುನಾರಚನೆ ಕುರಿತಂತೆ ನಡೆಸಿದ ಚರ್ಚೆ ಅಪೂರ್ಣವಾಗಿದ್ದು, ನಾಳೆ ಬೆಳಿಗ್ಗೆ ಮತ್ತೆ ಸಭೆ ನಡೆಯಲಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ. 
 
ಇಂದಿನ ಸಭೆಯಲ್ಲಿ ಕೇವಲ ಪ್ರಾಥಮಿಕ ಚರ್ಚೆ ನಡೆದಿದೆ. ಸಭೆ ಅಪೂರ್ಣವಾಗಿದ್ದರಿಂದ ನಾಳೆ ಬೆಳಿಗ್ಗೆ 10 ಗಂಟೆಗೆ ಮತ್ತೆ ಸೋನಿಯಾ ಅವರೊಂದಿಗೆ ಚರ್ಚೆ ಮುಂದುವರಿಸಲಾಗುವುದು. ನಾಳೆ ಪೂರ್ಣ ಪ್ರಮಾಣದ ಚರ್ಚೆಯಾಗಲಿದೆ ಎಂದು ತಿಳಿಸಿದ್ದಾರೆ. 
 
ಸೋನಿಯಾ ಗಾಂಧಿಯವರೊಂದಿಗಿನ ಸಭೆಯಲ್ಲಿ ರಾಜ್ಯದ ಉಸ್ತುವಾರಿ ಹೊತ್ತಿರುವ ದಿಗ್ವಿಜಯ್ ಸಿಂಗ್, ಕೆಪಿಸಿಸಿ ಅಧ್ಯಕ್ಷ ಜಿ.ಪರಮೇಶ್ವರ್ ಉಪಸ್ಥಿತರಿದ್ದರು ಎಂದು ಮೂಲಗಳು ತಿಳಿಸಿವೆ.
 
ಸಚಿಸ ಸಂಪುಟ ಪುನಾರಚನೆಯಾಗುವುದು ಬಹುತೇಕ ಖಚಿತವಾಗುತ್ತಿದ್ದಂತೆ ಸಚಿವರಲ್ಲಿ ತಮ್ಮ ಸ್ಥಾನಕ್ಕೆ ಸಂಚಕಾರ ಬರುತ್ತದೆಯೋ ಎನ್ನುವ ಆತಂಕ ಅವರನ್ನು ಕಾಡುತ್ತಿದೆ.

ತಾಜಾ ಸುದ್ದಿಗಳಿಗಾಗಿ ವೆಬ್ ದುನಿಯಾ ಮೊಬೈಲ್ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ