ಶಾಸಕ ಜಮೀರ್ ಅಹಮ್ಮದ್ ಹೆಸರು ಹೇಳಿಕೊಂಡು ಐಶಾರಾಮಿ ಕಾರುಗಳನ್ನು ಕದಿಯುತ್ತಿದ್ದ ಕಳ್ಳರನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ.. ನಸೀಬ್, ಮೊಹಮ್ಮದ್ ಆಜಂ ಬಂಧಿತ ಆರೋಪಿಗಳು, ಶಾಸಕ ಜಮೀರ್ ಅಹಮ್ಮದ್ ಅವರ ಪಾಸ್ ಬಳಸಿಕೊಂಡು ತಿರುಗಾಡುತ್ತಿದ್ದ ಈ ಖತರ್ನಾಕ್ ಕಳ್ಳರು, ತಮ್ಮ ಫಾರ್ಚೂನರ್ ಕಾರಿಗೆ ಶಾಸಕರ ಪಾಸ್ ಅಂಟಿಸಿಕೊಂಡು ಸುತ್ತಾಡ್ತಿದ್ದ ವಂಚಕರು, ಜಮೀರ್ ಅವರ ಆಪ್ತರು ಎಂದು ಹೇಳಿಕೊಂಡು ಹತ್ತಾರು ಮಂದಿಗೆ ಮಕ್ಮಲ್ ಟೋಪಿ ಹಾಕಿರೋದು ತನಿಖೆಯಲ್ಲಿ ಬೆಳಕಿಗೆ ಬಂದಿದೆ.
ಬಂಧಿತರಲ್ಲಿ ಆರೋಪಿ ನಸೀಬ್ ನ ಪತ್ನಿ ಐಸಿಐಸಿಐ ಬ್ಯಾಂಕ್ ನ ಮ್ಯಾನೇಜರ್ ಆಗಿದ್ದು,
ಮತ್ತೊರ್ವ ಆರೋಪಿ ಆಜಂ ಸೌದಿ ರಿಟರ್ನ್ ಎಂದು ತಿಳಿದು ಬಂದಿದೆ.. ಜಮೀರ್ ಅಪ್ತರೆಂದು ಹೇಳಿ ಕೊಂಡು ಮೂರು ಪ್ರಭಾವಿ ವ್ಯಕ್ತಿಗಳ ಕಾರನ್ನು ಕದ್ದು ಮಾರಾಟ ಮಾಡಿದ್ರು.. ದಾವಣಗೆರೆ ಜಿಲ್ಲೆಯ ಜೆಡಿಎಸ್ ಎಂ ಎಲ್ ಎ ಕ್ಯಾಂಡಿಡೇಟ್ ಅಸಾದುಲ್ಲಾ ರವರ ಫಾರ್ಚೂನರ್ ಕಾರನ್ನು ಕದ್ದು ಮಾರಾಟ ಮಾಡಿರೋದು ಹಾಗೇ ವೇಮಗಲ್ ನಲ್ಲಿ ವಕೀಲ ರೊಬ್ಬರಿಗೆ ಫೋರ್ಡ್ ಐ ಕಾನ್ ಕಾರು ಕೂಡ ಮಾರಾಟ ಮಾಡಿದ್ರು. ಕಾಂಗ್ರೆಸ್ ನ ಕಾರ್ಪೋರೇಟರ್ ಅಭ್ಯರ್ಥಿ ಲೋಕೇಶ್ ಗೂ ಕದ್ದ ಎಕ್ಸ್ ಯೂ ವಿ ಕಾರು ಮಾರಾಟ ಮಾಡಿದ್ರು..ಸದ್ಯ ಮೂರು ಮಂದಿ ಆರೋಪಿಗಳನ್ನ ಸಿಸಿಬಿ ಪೊಲೀಸರು ಬಂಧಿಸಿ ತನಿಖೆ ಮುಂದುವರೆಸಿದ್ದಾರೆ.