ಸಚಿವ ತನ್ವೀರ್ ಸೇಠ್ ವಿರುದ್ಧ ಜಾತಿ ನಿಂದನೆ ದೂರು ದಾಖಲು

ಮಂಗಳವಾರ, 11 ಏಪ್ರಿಲ್ 2017 (19:29 IST)
ಉಪನ್ಯಾಸಕರ ನೇಮಕಾತಿಯಲ್ಲಿ ಎಸ್‌ಸಿ.ಎಸ್‌ಟಿ ಸಮುದಾಯಕ್ಕೆ ಶೇ.5 ರಷ್ಟು ಕೃಪಾಂಕ ನೀಡುವಂತೆ ಲೆಕ್ಚರರ್ಸ್ ನಿಯೋಗ ಸಚಿವ ತನ್ವೀರ್ ಸೇಠ್ ಅವರನ್ನು ಭೇಟಿ ಮಾಡಿ ಒತ್ತಾಯಿಸಿದಾಗ ಜಟಾಪಟಿ ನಡೆದಿದೆ.
 
ಸಚಿವ ತನ್ವೀರ್ ಸೇಠ್ ಕಾರ್ಯದರ್ಶಿ, ಪೊಲೀಸ್ ಠಾಣೆಯಲ್ಲಿ ಲೆಕ್ಚರರ್ಸ್ ವಿರುದ್ಧ ದೂರು ದಾಖಲಿಸಿದ್ದಾರೆ. ಮತ್ತೊಂದೆಡೆ ಲೆಕ್ಟರರ್ಸ್ ಕೂಡಾ ಪೊಲೀಸ್ ಠಾಣೆಯಲ್ಲಿ ಸಚಿವರ ವಿರುದ್ಧ ಜಾತಿ ನಿಂದನೆ ದೂರು ದಾಖಲಿಸಿದ್ದಾರೆ.
 
ಎಸ್‌ಸಿ,ಎಸ್‌ಟಿ ಸಮುದಾಯಕ್ಕೆ ಶೇ.5 ರಷ್ಟು ಕೃಪಾಂಕ ಹೆಚ್ಚಿಸುವಂತೆ ಲೆಕ್ಚರರ್ಸ್ ಒತ್ತಾಯಿಸಿದಾಗ, ಸಿಡಿಮಿಡಿಗೊಂಡ ಸಚಿವ ತನ್ವೀರ್ ಸೇಠ್, ನಾನೊಬ್ಬ ಹಿರಿಯ ಸಚಿವ ಏನು ಮಾಡಬೇಕು ಎನ್ನುವುದು ನನಗೆ ಗೊತ್ತಿದೆ. ಸರಕಾರ ಕೇವಲ ಎಸ್‌‍ಸಿ, ಎಸ್‌ಟಿ ಸಮುದಾಯದ ಕೃಪಾಂಕ ಹೆಚ್ಚಿಸಲು ಅಧಿಕಾರ ನಡೆಸುತ್ತಿಲ್ಲ ಎಂದು ಗುಡುಗಿದ್ದಾರೆ.
 
ಪರಸ್ಪರ ವಾಗ್ವಾದ ವಿಕೋಪಕ್ಕೆ ತೆರಳಿದ್ದರಿಂದ ಸಚಿವ ತನ್ವೀರ್ ಸೇಠ್ ಆದೇಶದ ಮೇರೆಗೆ ವಿಧಾನಸೌಧ ಪೊಲೀಸ್ ಠಾಣೆಯ ಪೊಲೀಸರು ಕೆಲ ಲೆಕ್ಚರರ್ಸ್‌ಗಳನ್ನು ವಶಕ್ಕೆ ತೆಗೆದುಕೊಂಡಿದ್ದಾರೆ ಎಂದು ಮೂಲಗಳು ತಿಳಿಸಿವೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ. 

ವೆಬ್ದುನಿಯಾವನ್ನು ಓದಿ